ಶನಿವಾರಸಂತೆ, ಜೂ. ೨೨: ವರ್ಷಕ್ಕೊಮ್ಮೆ ಮುಂಗಾರು ಮಳೆ ಆರಂಭವಾಗುತ್ತಿದ್ದAತೆ ಕೆಲವರ ಮನೆಯಂಗಳದಲ್ಲಿ ರಾತ್ರಿ ವೇಳೆ ಬ್ರಹ್ಮಕಮಲ ಹೂವುಗಳು ಅರಳಿ ಕಣ್ಮನ ತಣಿಸುತ್ತಾ ಕಂಪು ಸೂಸುತ್ತವೆ. ಅತ್ಯಂತ ಪವಿತ್ರವಾದ ಅಪರೂಪದ ಹೂವು. ರಾತ್ರಿಯಲ್ಲಿ ಅರಳುತ್ತದೆ. ಸೂರ್ಯೋದಯಕ್ಕೂ ಮೊದಲೇ ಮುದುಡಿಕೊಳ್ಳುತ್ತದೆ.
ಹಿಮಾಲಯದ ಅತ್ಯಂತ ಪೂಜ್ಯ ಹೂವು ಬ್ರಹ್ಮ ಕಮಲ, ಅಧ್ಯಾತ್ಮಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ. ಪೊದೆಯಾಗಿ ಬೆಳೆಯುವ ಬಳ್ಳಿಗಳಲ್ಲಿ ರಾತ್ರಿ ಬಿರಿದು ಅರಳುವ ಈ ಹೂವುಗಳ ದರ್ಶನಕ್ಕೆ ಮನೆಮಂದಿ ಕಾದು ಕುಳಿತುಕೊಳ್ಳುತ್ತಾರೆ. ಮೊಗ್ಗು ಬಿರಿದು ಅರಳುತ್ತಾ ಬಂದAತೆ ಸಂಭ್ರಮಿಸುವ ಹೆಣ್ಣುಮಕ್ಕಳು ಆರತಿ ಬೆಳಗಿ ಪೂಜೆ ಸಲ್ಲಿಸಿ ನಮಸ್ಕರಿಸುವ ಸಂಸ್ಕಾರ ಮುದ ನೀಡುತ್ತದೆ.
ಪಟ್ಟಣದ ತ್ಯಾಗರಾಜ ಕಾಲೋನಿಯ ಗುತ್ತಿಗೆದಾರ ಲಕ್ಷö್ಮಣ್ ಮನೆಯಂಗಳದಲ್ಲಿ ರಾತ್ರಿ ಬಿರಿದು ಅರಳಿದ ಬ್ರಹ್ಮಕಮಲ ಹೂವುಗಳು ನೋಡುಗರ ಮನಸೂರೆಗೊಂಡವು.