ಮಡಿಕೇರಿ, ಜೂ. ೨೩: ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆಯ ನೂತನ ಅಧ್ಯಕ್ಷೆಯಾಗಿ ಪ್ರಮೀಳಾ ಶೆಟ್ಟಿ, ಕಾರ್ಯದರ್ಶಿಯಾಗಿ ಸ್ಮಿತಾ ಚಂಗಪ್ಪ ಮತ್ತು ವಲಯ ಸೇನಾನಿಯಾಗಿ ಕೆ. ವಸಂತ್ ಕುಮಾರ್ ನೇಮಕಗೊಂಡಿದ್ದಾರೆ. ರೋಟರಿ ವುಡ್ಸ್ ಸಂಸ್ಥೆಗೆ ೫ನೇ ವರ್ಷದ ಅಧ್ಯಕ್ಷೆಯಾಗಿ ಪ್ರಮೀಳಾ ಶೆಟ್ಟಿ, ಕಾರ್ಯದರ್ಶಿಯಾಗಿ ಸ್ಮಿತಾ ಚಂಗಪ್ಪ ಆಯ್ಕೆ ಮೂಲಕ ರೋಟರಿ ವುಡ್ಸ್ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆ, ಕಾರ್ಯದರ್ಶಿಯನ್ನು ಪಡೆದುಕೊಂಡ ಹಿರಿಮೆಗೆ ಪಾತ್ರವಾಗಿದೆ. ರೋಟರಿ ವುಡ್ಸ್ ಮತ್ತು ಆಲೂರು ಸಿದ್ದಾಪುರ ರೋಟರಿ ಸಂಸ್ಥೆಗಳಿಗೆ ರೋಟರಿ ವುಡ್ಸ್ ಮಾಜಿ ಅಧ್ಯಕ್ಷ ಕೆ. ವಸಂತ್ ಕುಮಾರ್ ವಲಯ ಸೇನಾನಿಯಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿ ನಿರ್ದೇಶಕರಿಗೆ ಪದಗ್ರಹಣ ಸಮಾರಂಭವು ತಾ. ೨೭ ರಂದು ಸಂಜೆ ೬.೩೦ ಗಂಟೆಗೆ ಮಡಿಕೇರಿ ಕೊಡವ ಸಮಾಜದಲ್ಲಿ ಆಯೋಜಿತವಾಗಿದೆ.
ಬೆಂಗಳೂರು ರೋಟರಿ ಸಂಸ್ಥೆಯ ಮಾಜಿ ಗವರ್ನರ್ ಎಲಿಜಬೆತ್ ಚೆರಿಯನ್ ಪದಗ್ರಹಣ ನೆರವೇರಿ ಸಲಿದ್ದು, ರೋಟರಿ ಸಹಾಯಕ ಗವರ್ನರ್ ಎಂ.ಡಿ. ರಂಗಸ್ವಾಮಿ, ಪಿ.ಎಂ. ದಿಲನ್ ಚಂಗಪ್ಪ, ವಲಯ ಸೇನಾನಿಗಳಾದ ಕೆ. ವಸಂತ್ ಕುಮಾರ್, ಕೆ.ಸಿ. ಕಾರ್ಯಪ್ಪ, ನಿರ್ಗಮಿತ ಅಧ್ಯಕ್ಷ ಕಿರಣ್ ಕುಂದರ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.