ಮಡಿಕೇರಿ, ಜೂ. ೨೩: ಸಾರ್ವಜನಿಕ ಹಿತರಕ್ಷಣಾ ಸಮಿತಿಯ ವಾರ್ಷಿಕ ಮಹಾಸಭೆ ಪೊನ್ನಂಪೇಟೆಯ ಇಗ್ಗುತಪ್ಪ ಸೌಹಾರ್ದ ಸಹಕಾರ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮಡಿಕೇರಿಯ ನೆರವಂಡ ಯಾನ ಸಂಜಯ್ ಹಾಗೂ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ಪೊನ್ನಂಪೇಟೆಯ ಕಾಟಿಮಾಡ ಭಾಷಿತ ದೇವಯ್ಯ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಿತಿ ಸ್ಥಾಪಕ ಅಧ್ಯಕ್ಷ ಅಜ್ಜಮಾಡ ಎಸ್ ಕಟ್ಟಿ ಮಂದಯ್ಯ, ಉಪಾಧ್ಯಕ್ಷ ಮಾಣಿರ ವಿಜಯ ನಂಜಪ್ಪ, ಸಂಘಟನಾ ಕಾರ್ಯದರ್ಶಿ ಕೋಳೆರ ರಾಜ ನರೇಂದ್ರ, ಗೌರವ ಕಾರ್ಯದರ್ಶಿ ಕಾಳಿಮಾಡ ದಿಲೀಪ್, ಕಾನೂನು ಸಲಹೆಗಾರರಾದ ಚೇಂದಿರ ಬೋಪಣ್ಣ ಹಾಗೂ ಜಂಟಿ ಕಾರ್ಯದರ್ಶಿ ಪುಲ್ಲೆರ ಸ್ವಾತಿ ಉಪಸ್ಥಿತರಿದ್ದರು.