ಮಡಿಕೇರಿ, ಜೂ. ೨೪: ಕೊಡವ ಭಾಷಿಕ ಸಮುದಾಯಗಳ ಕೂಟದ ೨೦೨೫-೨೬ನೇ ಸಾಲಿನ ಮಹಾಸಭೆ ತಾ. ೨೮ ರಂದು ಬೆಳಿಗ್ಗೆ ೧೧ ಗಂಟೆಗೆ ಮೂರ್ನಾಡು ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಲಿದೆ.
ಸಭಾಧ್ಯಕ್ಷತೆಯನ್ನು ಕೂಟದ ಅಧ್ಯಕ್ಷ ಡಾ. ಮೇಚೀರ ಸುಭಾಷ್ ನಾಣಯ್ಯ ಅವರು ವಹಿಸಲಿದ್ದು, ಅಂದು ಮೇ ತಿಂಗಳಲ್ಲಿ ಜರುಗಿದ ಪ್ರಥಮ ಕ್ರೀಡಾಕೂಟದ ಯಶಸ್ವಿಗೆ ಸಹಕರಿಸಿದ ಜನಾಂಗ ಬಾಂಧವರಿಗೆ ಧನ್ಯತಾ ಸಮರ್ಪಣೆಯನ್ನು ಸಲ್ಲಿಸಲಾಗುವುದು ಹಾಗೂ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಅಂಗಾAಗ ದಾನ ಮಾಡಿದ ಪಣಿಕ ಜನಾಂಗದ ದಿ. ಡಾಲು ಉತ್ತಯ್ಯ ಅವರ ಕುಟುಂಬಸ್ಥರನ್ನು ಗೌರವಿಸಲಾಗುವುದೆಂದು ಕೂಟದ ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ತಿಳಿಸಿದ್ದಾರೆ.