ಕುಶಾಲನಗರ, ಜೂ. ೨೪ : ಬೀದಿ ನಾಯಿಗಳ ಮೇಲೆ ವೇಗವಾಗಿ ವಾಹನ ಚಾಲಿಸಿ ನಾಲ್ಕು ನಾಯಿಗಳಿಗೆ ತೀವ್ರ ಗಾಯ ಉಂಟು ಮಾಡಿದ ಆರೋಪಿ ಮಾದಾಪಟ್ಟಣದ ನಿವಾಸಿ ಆಲಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳವಾರ ಬೆಳಿಗ್ಗೆ ಕುಶಾಲನಗರ ಸಮೀಪ ಮಾದಾಪಟ್ಟಣ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ನಾಯಿಗಳ ಮೇಲೆ ತನ್ನ ಜೀಪು ಹರಿಸಿ ಆಲಿ ಎಂಬಾತ ವಾಹನ ದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದ.
ಈ ಬಗ್ಗೆ ಅಲ್ಲಿನ ನಿವಾಸಿ ದಿಲೀಪ್ ಮತ್ತಿತರರು ಸೇರಿ ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಅಲ್ಲದೆ ಗಾಯಗೊಂಡ ನಾಯಿಗಳಿಗೆ ಚಿಕಿತ್ಸೆ ನೀಡುವಲ್ಲಿ ಮುಂದಾಗಿದ್ದರು. ಘಟನೆಗೆ ಸಂಬAಧಿಸಿದAತೆ ಆರೋಪಿ ಆಲಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಇದೀಗ ಒಂದು ನಾಯಿ ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ದುಷ್ಕೃತ್ಯ ಎಸಗಿದ ಆರೋಪಿಯ ವಾಹನವನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಅಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.