ನಾಪೋಕ್ಲು, ಜೂ. ೨೫: ಪೆರಾಜೆಯ ಪುತ್ಯದಲ್ಲಿ ಸುಳ್ಯದ ಶ್ರೀನಾಥ್ ಪಿ.ಎಲ್. ಅವರ ಮಾರ್ಗದರ್ಶನದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರದ ಲೋಕಾರ್ಪಣೆ, ಪ್ರವೇಶ ಹಾಗೂ ದೇವಿಯ ರಜತ ಉಬ್ಬುಚಿತ್ರ ಸ್ಥಾಪನ ಕಾರ್ಯಕ್ರಮ ಪೆರಾಜೆ ಶಾಸ್ತಾವು ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟ್ರಮಣ ಪಾಂಙಣಣ್ಣಾಯ ಅವರ ನೇತೃತ್ವದಲ್ಲಿ ನಡೆಯಿತು.
ಶ್ರೀ ಶಾಸ್ತಾವು ದೇವಸ್ಥಾನದಿಂದ ನೂತನ ಭಜನಾ ಮಂದಿರಕ್ಕೆ ಅನ್ನಪೂರ್ಣೇಶ್ವರಿ ದೇವಿಯ ಉಬ್ಬುಚಿತ್ರ ಮೆರವಣಿಗೆ ಸಾಗಿ ಬಂದು ವಾಸ್ತುರಾಕ್ಷೋಘ್ನ, ಹೋಮ, ವಾಸ್ತು ಬಲಿ ನಡೆದು, ಗಣಪತಿ ಹವನ, ನೂತನ ಮಂದಿರ ಪ್ರವೇಶ, ಶ್ರೀ ಅನ್ನಪೂರ್ಣೇಶ್ವರಿ ದೇವಿಯ ರಜತ ಉಬ್ಬುಚಿತ್ರ ಸ್ಥಾಪನೆ, ಲಲಿತ ಸಹಸ್ರನಾಮ ಪಾರಾಯಣ, ಅರ್ಚನೆ ಶ್ರದ್ಧಾಭಕ್ತಿಯಿಂದ ಜರುಗಿತು. ನಂತರ ಅನ್ನಸಂತರ್ಪಣೆ, ವಿವಿಧ ಭಜನಾ ತಂಡಗಳಿAದ ಭಜನಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮವು ಪೆರಾಜೆ ಶಾಸ್ತಾವು ದೇವಸ್ಥಾನದ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಆಗಮಿಸಿ ಆಶೀರ್ವಚನ ನೀಡಿದರು.
ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರು ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ದತ್ತ ಜಯಂತಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಗಜಾನನ ಪೈ, ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಸ್ಥಳ ದಾನಿಗಳು ಮೇದಪ್ಪ ಬಂಗಾರಕೋಡಿ, ಮಾರುತಿ ಕನ್ಸ್ಸ್ಟçಕ್ಷನ್ ನಿರ್ಮಾಣ ಸಲಹೆಗಾರ ಹಾಗೂ ಮಾರ್ಗದರ್ಶಕ ಕಿಶೋರ್ ಕುಮಾರ್ ಬಿ.ಆರ್., ಭಜನಾ ಮಂಡಳಿ ಅಧ್ಯಕ್ಷ ಶುಭಾಶ್ಚಂದ್ರ ಬಂಗಾರಕೋಡಿ, ಸಂಚಾಲಕ ವಿಶ್ವನಾಥ ಬಂಗಾರಕೋಡಿ, ಗೌರವಾಧ್ಯಕ್ಷ ಜಗದೀಶ್ ಬಂಗಾರಕೋಡಿ, ಕಾರ್ಯದರ್ಶಿ ಧರ್ಮಪಾಲ ಕಾಪಿಲ, ಖಜಾಂಚಿ ರಾಮಯ್ಯ ತೊಕ್ಕುಳಿ, ಆರ್ಥಿಕ ಸಮಿತಿಯ ಅಧ್ಯಕ್ಷ ನಂದಕುಮಾರ್ ಅಡ್ಕ, ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯ ಅರ್ಚನಾ ಸಮಿತಿಯ ನಂಜಪ್ಪ ಅಡ್ಕ, ಉಪಾಧ್ಯಕ್ಷ ಮಾದಪ್ಪ ತೊಕ್ಕುಳಿ ಹಾಗೂ ಸಮಿತಿಯ ಸದಸ್ಯರು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುಭಾಶ್ಚಂದ್ರ ಬಂಗಾರಕೋಡಿ ಸ್ವಾಗತಿಸಿ, ರೇಖಾ ಯು. ಮತ್ತು ಮನೋಜ್ ನಿಡ್ಯಮಲೆ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ್ ಬಂಗಾರಕೋಡಿ ವಂದಿಸಿದರು.