ಮಡಿಕೇರಿ, ಜೂ. ೨೫: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ೨೦೨೫-೨೬ನೇ ಸಾಲಿನ ಡಿಜಿ ಹಾಗೂ ಐಜಿಪಿ ಕಮಾಂಡೇಶನ್ ಡಿಸ್ಕ್ ಪ್ರಶಸ್ತಿಗೆ ಮೂಲತಃ ಕೊಡಗು ಜಿಲ್ಲೆಯವರಾದ ಇಬ್ಬರು ಪೊಲೀಸ್ ಅಧಿಕಾರಿಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಿವಮೊಗ್ಗದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಅಮ್ಮಂಡ ಕಾರ್ಯಪ್ಪ ಹಾಗೂ ಬೆಂಗಳೂರು ಉತ್ತರ ವಿಭಾಗದಲ್ಲಿ ಎಸಿಪಿ (ಸಂಚಾರಿ) ಯಾಗಿರುವ ಅಂಜಪರವAಡ ಕವಿತಾ ಅವರುಗಳು ಈ ಬಾರಿಯ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.