ಮಡಿಕೇರಿ, ಜೂ. ೨೫: ಬಿಟ್ಟಂಗಾಲದ ಬಾರ್‌ನಲ್ಲಿ ಊಟಕ್ಕೆ ತೆರಳಿದ್ದ ಬೆಂಗಳೂರಿನ ಬ್ಯಾಂಕ್ ಉದ್ಯೋಗಿ, ದೇವಣಗೇರಿ ಗ್ರಾಮದ ಪುಗ್ಗೇರ ಚಂಗಪ್ಪ ಅವರ ಮೇಲೆ ಎಂಟು ಜನರ ತಂಡ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಆರು ಜನರ ಮೇಲೆ (ಃಓS), ೨೦೨೩ (U\s-೧೧೮(೧)_೩(೫) ಅಡಿಯಲ್ಲಿ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳು ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇವಣಗೇರಿ ಗ್ರಾಮದ ಪುಗ್ಗೇರ ಚಂಗಪ್ಪ ಎಂಬವರು ನೀಡಿದ ದೂರಿನ ಪ್ರಕಾರ, ಜೂ. ೧೯ ರಂದು ರಾತ್ರಿ ೧೦.೩೦ಕ್ಕೆ ಬಿಟ್ಟಂಗಾಲದ ಬಾರ್‌ನಲ್ಲಿ ಊಟ ಮಾಡುತ್ತಿದ್ದಾಗ ಇಬ್ಬರು ಯುವಕರು ಬಿಯರ್‌ಗಾಗಿ ಬಾರ್ ಸಿಬ್ಬಂದಿ ಜೊತೆ ಜಗಳ ಮಾಡುತ್ತಿದ್ದರು. ಅವರನ್ನು ಸಮಾಧಾನಪಡಿಸಿ ಹೊರಗೆ ಕರೆದೊಯ್ದಾಗ ೫-೬ ಮಂದಿ ಸೇರಿ ಕಬ್ಬಿಣದ ರಾಡ್, ಕಲ್ಲು, ದೊಣ್ಣೆ ಹಾಗೂ ಬಿಯರ್ ಬಾಟಲಿಯಿಂದ ತಲೆ, ಕಣ್ಣಿನ ಭಾಗಕ್ಕೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಹಲ್ಲೆಯಿಂದ ಕೆಳಗೆ ಬಿದ್ದಾಗಲೂ ಆರೋಪಿಗಳು ಹಲ್ಲೆ ಮುಂದುವರಿಸಿದ್ದರು. ಜೊತೆಗಿದ್ದ ವರುಣ್ ಹಾಗೂ ಬಿದ್ದಂಡ ಕಾರ್ಯಪ್ಪ ಭಯಗೊಂಡು ಸ್ಥಳಕ್ಕೆ ಬಂದಿಲ್ಲ ಎಂದು ಚಂಗಪ್ಪ ತಿಳಿಸಿದ್ದಾರೆ. ಹಲ್ಲೆ ನಡೆಸಿದವರು ವಾಹನಗಳಲ್ಲಿ ಪರಾರಿಯಾಗಿದ್ದಾರೆ.ಗಾಯಾಳು ಚಂಗಪ್ಪ ಬೆಂಗಳೂರಿನ ಇನ್ವೆಸ್ಟ್ಮೆಂಟ್ ಬ್ಯಾಂಕ್‌ನಲ್ಲಿ ೮ ವರ್ಷದಿಂದ ಉದ್ಯೋಗಿಯಾಗಿದ್ದು, ನೆಂಟರ ಮದುವೆಗೆಂದು ಊರಿಗೆ ಬಂದಿದ್ದರು. ಹಲ್ಲೆಯಿಂದ ತೀವ್ರ ನೋವು ಕಾಣಿಸಿಕೊಂಡಿದ್ದರಿAದ ಮೊದಲು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ, ನಂತರ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಲ್ಲೆ ನಡೆಸಿದವರನ್ನು ಕಲ್ಪಕ್, ಕೌಶಿಕ್, ರೋಶನ್, ವಿಷ್ಣು, ಕರಣ್, ತಪಸ್ವಿನಿ ಹಾಗೂ ಇಬ್ಬರು ಅಪರಿಚಿತರು ಎಂದು ಗಾಯಾಳು ಹೆಸರಿಸಿದ್ದಾರೆ. ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್ ಗಾಯಾಳುವಿನ ಹೇಳಿಕೆ ದಾಖಲಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.