ಪೆರಾಜೆ, ಜೂ. ೨೫: ದೇವರಕೊಲ್ಲಿ ಬಳಿ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ.

ಗಾಯಾಳನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಆ್ಯಂಬ್ಯುಲೆನ್ಸ್ ಮೂಲಕ ಸಾಗಿಸಲಾಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ವ್ಯಕ್ತಿ ಬಿಜಾಪುರ ಮೂಲದ ಮಹಾಂತೇಶ್ ಎಂದು ತಿಳಿದುಬಂದಿದೆ.

ಮಹಾAತೇಶ ಅವರು ಪುತ್ತೂರಿನಲ್ಲಿ ಹಿಟಾಚಿ ಆಪರೇಟರಾಗಿ ಕೆಲಸ ನಿರ್ವಹಿಸುತ್ತಿದ್ದು ಅವರು ಪುತ್ತೂರಿನಿಂದ ಸುಳ್ಯ ಮಾರ್ಗವಾಗಿ ಕುಶಾಲನಗರಕ್ಕೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಗಾಯಾಳು ಮಹಾಂತೇಶ್ ಅವರನ್ನು ಆ್ಯಂಬ್ಯುಲೆನ್ಸ್ ಚಾಲಕರಾದ ಶರತ್ ಕಲ್ಲುಗುಂಡಿ ಮತ್ತು ವಿನಯ್ ಸ್ಥಳೀಯರ ಸಹಕಾರದಿಂದ ಸುಳ್ಯ ಕೆವಿಜಿ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ.

ಮಹಾಂತೇಶ್ ಅವರ ತಲೆ ಹಾಗೂ ಕೈಗೆ ಗಂಭೀರ ಗಾಯವಾಗಿದ್ದು ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- ಗಿರೀಶ್ ಪೆರಾಜೆ.