ಭಾರತದಲ್ಲಿ ಈ ವರ್ಷ ವಾಡಿಕೆಯ ಸರಾಸರಿಗಿಂತ ಶೇಕಡ ಏಳರಷ್ಟು ಮಳೆ ಕೊರತೆಯ ಸಾಧ್ಯತೆಯನ್ನು ಮೂರು ತಿಂಗಳ ಹಿಂದೆ ಹವಾಮಾನ ಇಲಾಖೆ ಅಂದಾಜಿಸಿತ್ತು. ಇತ್ತೀಚಿಗೆ, “ವಿಶ್ವ ಬರ ವಿರೋಧಿ ದಿನ” ವಾದ ಜೂನ್ ೧೭ ರಂದು ಪರಿಷ್ಕೃತ ಹವಾಮಾನ ವರದಿ ಬಿಡುಗಡೆಯಾಗಿದ್ದು, ಈ ವರ್ಷದ “ಎಲ್ ನಿನೋ” ದುಷ್ಪರಿಣಾಮದಿಂದ ಭಾರತದಲ್ಲಿ ಕಡಿಮೆ ಮಳೆ ಸುರಿಯುವ ಮುನ್ಸೂಚನೆಯಿಂದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಜೂನ್ ತಿಂಗಳ ಕೊನೆಯ ವಾರದಲ್ಲಿರುವುದರಿಂದ, ಕೊಡಗು ಹಾಗೂ ಇತರ ಮಲೆನಾಡಿನ ಪ್ರದೇಶಗಳಲ್ಲಿ ಕೇವಲ ಶೇಕಡ ೩೬ ಮತ್ತು ಕರಾವಳಿ ಪ್ರದೇಶದಲ್ಲಿ ಶೇಕಡ ೪೦ ರಷ್ಟು ಕಡಿಮೆ ಮುಂಗಾರು ಮಳೆ ಸುರಿದಿದೆ ಎಂಬ ಅಹಿತಕರ ದಾಖಲೆ ಬಿಡುಗಡೆಯಾಗಿದೆ. ಈ ವರ್ಷದ ಕೃಷಿ ಚಟುವಟಿಕೆಗಳು ಇಲ್ಲಿಯ ತನಕ ನಿರಾಶಾದಾಯಕವಾಗಿದ್ದು, ಈ ಬಗ್ಗೆ ಕರ್ನಾಟಕದ ನೂತನ ಮುಖ್ಯಮಂತ್ರಿಯವರು ಆತಂಕ ವ್ಯಕ್ತಪಡಿಸಿದ್ದು, ‘ಬರ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿರಿ’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಸ್ವಾತಂತ್ರಾö್ಯನAತರ, ಅನೇಕ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸಿ, ಕಾಲುವೆಗಳ ಮೂಲಕ ವ್ಯವಸಾಯಕ್ಕೆ ನೀರಾವರಿ ಅನುಕೂಲತೆ ಮಾಡಿದರೂ; ಈಗಲೂ ನಮ್ಮ ರೈತರು ‘ಮುಂಗಾರು ಮಳೆ’ ಆಗಮನಕ್ಕೆ ಪಶ್ಚಿಮದ ಆಕಾಶವನ್ನು ಆಶಾದೃಷ್ಟಿಯಿಂದ ನೋಡುವುದು ನಿಂತಿಲ್ಲ! ವಾಡಿಕೆಯಂತೆ ಜೂನ್ ತಿಂಗಳ ಒಂದನೇ ತಾರೀಕಿನ ಆಸು-ಪಾಸು ಮುಂಗಾರು ಮಾರುತಗಳು ಅರಬ್ಬೀ ಸಮುದ್ರದ ಕಡೆಯಿಂದ ಮಳೆ ಮೋಡಗಳನ್ನು ಹೊತ್ತುತಂದು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಮಳೆ ಸುರಿಯುತ್ತದೆ. ಧಾರಾಕಾರದ ಮುಂಗಾರಿಗೆ ನದಿಗಳೆಲ್ಲಾ ತುಂಬಿ ಹರಿದು ಅಣೆಕಟ್ಟುಗಳು, ಕೆರೆ-ಕುಂಟೆಗಳು ಭರ್ತಿಯಾದಾಗ ರೈತರು ಹೊಲ-ಗದ್ದೆಗಳಲ್ಲಿ ಕೃಷಿ ಕೆಲಸಕ್ಕೆ ತೊಡಗುತ್ತಾರೆ. ಆದರೆ ಈ ವರ್ಷ ಅಂತಹ ಕೃಷಿ ಚಟುವಟಿಕೆ ಕಾಣಿಸುತ್ತಿಲ್ಲ.

“ಎಲ್‌ನಿನೋ'' ನಿಯಂತ್ರಕ

ಇದೆ ಮೇ ತಿಂಗಳ ಇಪ್ಪತ್ತಾರಕ್ಕೇ, ವಾಡಿಕೆಗಿಂತ ನಾಲ್ಕೆöÊದು ದಿವಸ ಮೊದಲೇ ಕೇರಳಕ್ಕೆ ಮುಂಗಾರು ಪ್ರವೇಶಿಸುತ್ತದೆ ಎಂಬ ಎರಡನೆಯ ಆಶಾದಾಯಕ ಪ್ರಕಟಣೆಯನ್ನು ಹವಾಮಾನ ಇಲಾಖೆ ಮತ್ತೊಮ್ಮೆ ಹೊರಡಿಸಿತ್ತು. ಆದರೆ, ಆಧುನಿಕ ಉಪಗ್ರಹಗಳ ಮೂಲಕ ಮಾಹಿತಿ ಪಡೆಯುತ್ತಿದ್ದ ಹವಾಮಾನ ಇಲಾಖೆಗೆ ಸುಳಿವೇ ಕೊಡದಂತೆ “ಎಲ್ ನಿನೋ” ಎಂಬ ‘ಮಳೆಗಾಳಿಯ ಪ್ರಕೃತಿಯ ನಿಯಂತ್ರಕ ವ್ಯವಸ್ಥೆ’ ಇದ್ದಕ್ಕಿದ್ದಂತೆ ತನ್ನ ದಾಳವನ್ನು ಪೆಸಿಫಿಕ್ ಮಹಾ ಸಾಗರದಲ್ಲಿ ಉರುಳಿಸಿ, ಮುಂಗಾರು ಮಾರುತದ ಆಗಮನದ ಮೇಲೆ ತನ್ನ ಪ್ರಭಾವನ್ನು ಬೀರಿತ್ತು. ಇದರಿಂದ ಹೆಚ್ಚು ಕಡಿಮೆ ಹತ್ತು ದಿನಗಳಷ್ಟು ತಡವಾಗಿ, ಜೂನ್ ಐದನೇ ತಾರೀಕಿನಂದು ಒಂದಷ್ಟು ಶುಷ್ಕ ಮೋಡಗಳೊಂದಿಗೆ ಕೇರಳವನ್ನು ಪ್ರವೇಶಿಸಿದ ಮುಂಗಾರು ತೀರಾ ದುರ್ಬಲ ಗಾಳಿಯೊಂದಿಗೆ ಉತ್ತರದತ್ತ ತೆವಳುತ್ತಿದೆ. ಅಂದರೆ ಈ ವರ್ಷ, ಮೊದಲು ಅಂದಾಜಿಸಿದ್ದ ಶೇಕಡಕ್ಕಿಂತ ಕಡಿಮೆ ಮಳೆ ಆಗುವ ಸಂಭವವಿದೆ. ಇದಕ್ಕೆಲ್ಲಾ ಕಾರಣವಾಗಿದ್ದು, ಕೋಟ್ಯಂತರ ವರ್ಷಗಳಿಂದ ಪೆಸಿಫಿಕ್ ಸಾಗರದಲ್ಲಿ ಭೂಮಿಯ ಹವಾಮಾನದ ವಿನ್ಯಾಸವನ್ನೇ ಬದಲಾಯಿಸುವ, ಮಾನವನ ಹಿಡಿತಕ್ಕೆ ಸಿಕ್ಕದ“ಎಲ್ ನಿನೋ” ಮತ್ತು “ಲಾ ನಿನೋ” ಎಂಬ ಎರಡು ಸ್ವಾಭಾವಿಕ ವಿದ್ಯಮಾನಗಳು. ಹಾಗೆಂದರೇನು ಎಂದು ತಿಳಿಯೋಣ.

ಪ್ರಪಂಚದ ಐದು ಸಾಗರಗಳ ಪೈಕಿ ಪೆಸಿಫಿಕ್ ಸಾಗರವೇ ವಿಶಾಲ ಮತ್ತು ಅತ್ಯಂತ ಆಳವಾದದ್ದು ಎಂದು ಶಾಲೆಯಲ್ಲಿ ನಾವು ಭೂಗೋಳಶಾಸ್ತçದಲ್ಲಿ ಕಲಿತಿದ್ದೇವೆ. ಪೆಸಿಫಿಕ್ ಮಹಾಸಾಗರವು ಒಂದು ಕಡೆ ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳ ಪಶ್ಚಿಮ ಕರಾವಳಿಗಳಿಂದ ತೊಡಗಿ ಏಷ್ಯಾ ಖಂಡದ ಪೂರ್ವ ಕರಾವಳಿಗಳು ಹಾಗೂ ಆಸ್ಟೆçÃಲಿಯಾವನ್ನು ಒಳಗೊಂಡAತೆ ಉತ್ತರಕ್ಕೆ ಆರ್ಕ್ಟಿಕ್ ಮತ್ತು ದಕ್ಷಿಣಕ್ಕೆ ಅಂಟಾರ್ಟಿಕ್ ಧ್ರುವ ಪ್ರದೇಶಗಳನ್ನು ಮೇರೆಯಾಗುಳ್ಳ ವಿಶಾಲವಾದ ಜಲಪ್ರದೇಶ. ಅಂತೆಯೇ, ಇದು ಎಷ್ಟು ಆಳವಾಗಿದೆಯೆಂದರೆ, ಇಪ್ಪತ್ತೆಂಟು ಸಾವಿರ ಅಡಿಗಳಿಗಿಂತ ತುಸು ಎತ್ತರವಾಗಿರುವ ನಮ್ಮ ಹಿಮಾಲಯದ ಮೌಂಟ್ ಎವರೆಸ್ಟ್ ಶಿಖರವನ್ನೇನಾದರೂ ಕಿತ್ತು ಪೆಸಿಫಿಕ್ ಸಾಗರದಲ್ಲಿ ಮುಳುಗಿಸಿದರೆ, ಅದರ ಮೇಲೆ ಮತ್ತೂ ಎಂಟು ಸಾವಿರ ಅಡಿಗಳಷ್ಟು ನೀರು ನಿಂತಿರುವಷ್ಟು; ಅಂದರೆ ಸುಮಾರು ಮೂವತ್ತಾರು ಸಾವಿರ ಅಡಿ ಆಳವಾದ ಅಪಾರವಾದ ಜಲರಾಶಿಯೂ ಅಲ್ಲಿದೆ. ಈ ಬೃಹತ್ ಆಳ-ವಿಸ್ತಾರಗಳ ಪೆಸಿಫಿಕ್ ಸಾಗರದ ಅಪಾರ ಜಲರಾಶಿಯೇ ಭೂಮಂಡಲದ ಸಂಪೂರ್ಣ ಮಳೆಗಾಳಿ, ಉಷ್ಣಾಂಶ-ಶೀತಮಾರುತ ಮತ್ತು ತೇವಾಂಶಗಳನ್ನು ನಿರ್ಧರಿಸುವ ಪ್ರಕೃತಿಯ ಕಾರ್ಖಾನೆಯಂತಿದೆ. ಈ ಪೆಸಿಫಿಕ್ ಸಾಗರದ ಮಧ್ಯ ಮತ್ತು ಪೂರ್ವಭಾಗಳಲ್ಲಿ ಸೂರ್ಯನ ತಾಪಮಾನದಿಂದಲೋ ಅಥವಾ ಜ್ವಾಲಾಮುಖಿಯ ಸ್ಫೋಟ ಮುಂತಾದ ಬೇರಾವುದೋ ನೈಸರ್ಗಿಕ ಕಾರಣಗಳಿಂದ ಸಮುದ್ರದ ನೀರಿನಲ್ಲಿ ಉಂಟಾಗುವ ಉಷ್ಣಾಂಶದ ಹೆಚ್ಚಳದಿಂದ “ಉಷ್ಣ ನೀರಿನ ಪ್ರವಾಹ” ಉಂಟಾಗಿ, ಪೆಸಿಫಿಕ್ ಸಾಗರದ ಪೂರ್ವಕ್ಕಿರುವ ದಕ್ಷಿಣ ಮತ್ತು ಉತ್ತರ ಅಮೆರಿಕಾ ಖಂಡಗಳ ಉದ್ದಕ್ಕೂ ಅಂಟಾರ್ಕ್ಟಿಕ್ ಖಂಡದ ತಂಪು ಪ್ರದೇಶದತ್ತ ಹರಿಯುವ ಕ್ರಿಯೆಗೆ “ಎಲ್ ನಿನೋ” ಎಂದು ಕರೆಯುತ್ತಾರೆ. ಉಷ್ಣನೀರಿನ ಈ ಚಲನೆಯಿಂದ, ಭಾರತ ಸೇರಿದಂತೆ ದಕ್ಷಿಣ ಏಷ್ಯಾ ರಾಷ್ಟçಗಳ ವಾರ್ಷಿಕ ಮುಂಗಾರು ಮಾರುತಗಳಲ್ಲಿ; ಗಾಳಿ-ಮೋಡಗಳಲ್ಲಿ ತೇವಾಂಶ ಕಡಿಮೆಯಾಗಿ ಶುಷ್ಕ ವಾತಾವರಣದಿಂದ, ವಾಡಿಕೆಗಿಂತ ಕಡಿಮೆ ಮಳೆ ಬೀಳುತ್ತದೆ. ಅಂತೆಯೇ ಭೂಗೋಳದ ದಕ್ಷಿಣಕ್ಕಿರುವ ಆಸ್ಟೆçÃಲಿಯಾ ಖಂಡದಲ್ಲಿ ಒಣಹವೆಯ ಪರಿಣಾಮವಾಗಿ ಕಾಡ್ಗಿಚ್ಚು ಹೆಚ್ಚು ಹಾನಿ ಮಾಡುತ್ತದೆ. ಇದನ್ನೇ ‘ಎಲ್ ನಿನೋ ಪರಿಣಾಮ’ ಎಂದು ಕರೆಯುತ್ತಾರೆ. ಇದಕ್ಕೆ ವಿರುದ್ಧವಾದ ಇನ್ನೊಂದು ಕ್ರಿಯೆ ಎಂದರೆ, “ಲಾ ನಿನೋ” ಪರಿಣಾಮವಾದಾಗ, ಇದೆ ಫೆಸಿಫಿಕ್ ಸಾಗರ ಪ್ರದೇಶದಲ್ಲಿ ‘ತಂಪು ನೀರಿನ ಹರಿಯುವಿಕೆ’ಯಿಂದ, ಭಾರತ ಸೇರಿದಂತೆ ದಕ್ಷಿಣ ಏಷ್ಯಾ ಪ್ರದೇಶಗಳಲ್ಲಿ ಅಧಿಕ ಮಳೆ, ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಪೆಸಿಫಿಕ್ ಸಾಗರದ ಈ ಬಿಸಿನೀರು ಮತ್ತು ತಂಪನೆಯ ನೀರಿನ ಹರಿವು ಅಲ್ಲಿ ಉಂಟಾಗುವ ತಾಪಮಾನದ ಏರುಪೇರಿಗೆ ಅನುಗುಣವಾಗಿ ಪ್ರತೀ ಎರಡರಿಂದ ಏಳು ವರ್ಷಗಳಿಗೊಮ್ಮೆ ‘ಎಲ್ ನಿನೋ’ ಮತ್ತು ‘ಲಾನಿನೋ’ಗಳ ಪರಿಸ್ಥಿತಿ ಉಂಟಾಗುತ್ತವೆ. ಈ ಕ್ರಿಯೆಯಲ್ಲಿ ಕರಾವಳಿವರೆಗೆ ತುಸು ಬಿಸಿಯಾದ ನೀರಿನ ಹರಿವನ್ನು ಪ್ರಥಮವಾಗಿ ಗುರುತಿಸಿದ್ದು ಕ್ರಿ.ಶ.೧೬೦೦ರ ಸುಮಾರಿಗೆ ದಕ್ಷಿಣ ಅಮೆರಿಕಾದ ಪೆರು ದೇಶದ ಮೀನುಗಾರರು.

ಸಾಮಾನ್ಯ ಸನ್ನಿವೇಶದಲ್ಲಿ, ಸಮುದ್ರ ನೀರಿನ ತಾಪಮಾನವು ಭೂಮಧ್ಯ ರೇಖೆಯ ಆಸು-ಪಾಸು ಸುಮಾರು ೨೫ ಡಿಗ್ರಿ ಸೆಂಟಿಗ್ರೇಡ್ ಸರಾಸರಿ ಬಿಸಿಯಾಗಿದ್ದರೆ, ಎಲ್ ನಿನೋ ಸಂದರ್ಭಗಳಲ್ಲಿ ಕೇವಲ ಅರ್ಧ ಡಿಗ್ರಿಯಿಂದ ಎರಡು ಡಿಗ್ರಿಯಷ್ಟು ಹೆಚ್ಚಾಗುತ್ತದೆ. ಈ ನಗಣ್ಯ ಬಿಸಿ ಏರಿಕೆಯು ಜಾಗತಿಕ ಹವಾಮಾನದಲ್ಲಿ ಊಹಿಸಲಾಗದಷ್ಟು ಅಲ್ಲೋಲ-ಕಲ್ಲೋಲವನ್ನು ಉಂಟುಮಾಡುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಇನ್ನು ಮಾನವ ನಡೆಸುವ ಪೆಟ್ರೋಲ್-ಕಲ್ಲಿದ್ದಲು ಸುಡುವಿಕೆ; ಅರಣ್ಯ-ಪರಿಸರ ನಾಶ, ಯುದ್ಧ ಮತ್ತು ಬಾಂಬುಗಳAತ ಘನಘೋರ ಕೃತ್ಯಗಳಿಂದ ಹವಾಮಾನದ ಬಿಸಿ ಏರಿಕೆಗಳು ಮುಂದೆ ಆಗುವ ಅನಾಹುತಗಳನ್ನು ಪರಿಸರ ವಿಜ್ಞಾನಿಗಳು ಎಚ್ಚರಿಸುತ್ತಲೇ ಬಂದಿರುವುದು ಬೇರೆಯದೇ ವಿಷಯ. ೨೦೨೬ರ ಎಲ್ ನಿನೋ ಪರಿಣಾಮದಿಂದ ಭಾರತ ದೇಶದ ನೀರಾವರಿ ಮತ್ತು ಕೃಷಿ ಕ್ಷೇತ್ರಗಳ ಮೇಲೆ ನೇರ ಪ್ರಹಾರ ಉಂಟುಮಾಡುತ್ತದೆ. ನಾವು ಕಂಪ್ಯೂಟರ್ ಮಾಹಿತಿ ಕ್ಷೇತ್ರಗಳಲ್ಲಿ, ಮೇಕ್ ಇನ್ ಇಂಡಿಯಾ ಕೈಗಾರಿಕೆಗಳಲ್ಲಿ, ಆಹಾರಧಾನ್ಯ ಉತ್ಪಾದನೆಯಲ್ಲಿ ಎಷ್ಟೇ ಅಭಿವೃದ್ಧಿ ಸಾಧಿಸಿದರೂ, ನಮ್ಮದು ಮಳೆಯನ್ನು ನಂಬಿದ ಕೃಷಿ ಪ್ರಧಾನ ದೇಶವಾಗಿದೆ. ವಾರ್ಷಿಕವಾಗಿ ಕೇವಲ ಇಪ್ಪತ್ತು ಇಂಚು ಮಳೆಬೀಳುವ ಜೈಸಲ್ಮೇರ್‌ನಂತ ಒಣಪ್ರದೇಶಗಳ ಜೊತೆಗೆ ವಾರ್ಷಿಕ ನಾಲ್ಕುನೂರು ಇಂಚುಗಳಿಗಿAತ ಜಾಸ್ತಿ ಮಳೆ ಸುರಿಯುವ ಚಿರಾಪುಂಜಿ, ಆಗುಂಬೆ, ಕೊಡಗಿನ ಮುಂಡ್ರೋಟು ಪ್ರದೇಶಗಳೂ ನಮ್ಮ ಭಾರತದಲ್ಲಿವೆ. ಆದರೆ ಇಷ್ಟೆಲ್ಲಾ ನೀರು ಮಳೆಗಾಲದಲ್ಲಿ ಸುರಿದಾಗ, ಕೆಲವೇ ಕೆಲವು ಅಣೆಕಟ್ಟುಗಳಲ್ಲಿ ಸ್ವಲ್ಪಮಟ್ಟಿಗೆ ಸಂಗ್ರಹವಾಗಿ ಹೆಚ್ಚಿನ ಪಾಲು ವ್ಯರ್ಥವಾಗಿ ಸಮುದ್ರ ಸೇರುತ್ತದೆ. ಕರ್ನಾಟಕ ರಾಜ್ಯದ ಸುಮಾರು ಎರಡು ಕೋಟಿ ಎಕರೆಗಳಷ್ಟಿರುವ ಒಟ್ಟು ಕೃಷಿ ಜಮೀನಿನಲ್ಲಿ ಅರ್ಧದಷ್ಟಿರುವ ನೀರಾವರಿ ಜಮೀನಿಗೆ ಈ ಬೆರಳೆಣಿಕೆಯ ಹೊಳೆ ಅಣೆಕಟ್ಟುಗಳ ನೀರೇ ಮೂಲ ಆಧಾರ. ಉಳಿದ ಅರ್ಧದಷ್ಟು ಜಮೀನಿನ ರಾಗಿ-ಜೋಳದಂತ ಒಣ ಬೇಸಾಯಕ್ಕೆ ಆಕಾಶದಿಂದ ಬೀಳುವ ಮಳೆರಾಯನ ಕೃಪೆ ಬೇಕೇ ಬೇಕು. ಇದರ ಜೊತೆಯಲ್ಲಿ, ಬೆಳೆಯುತ್ತಿರುವ ಬೆಂಗಳೂರು-ಮೈಸೂರು, ಮಂಡ್ಯದAತ ಅನೇಕ ಪಟ್ಟಣಗಳಿಗೆ ಕುಡಿಯುವ ಶುದ್ಧ ನೀರಿಗಾಗಿ ಟಿಎಂಸಿ ಲೆಕ್ಕದಲ್ಲಿ ನೀರನ್ನು ಮೀಸಲಾಗಿಡಬೇಕು. ಧಾರವಾಡ ಮಡಿಕೇರಿಯಂತ ಅನೇಕ ಪಟ್ಟಣಗಳಿಗೆ ನೀರು ಒದಗಿಸಲು ಲಭ್ಯವಿರುವ ಹೊಳೆ-ಕೆರೆಗಳನ್ನು ಅವಲಂಬಿಸಬೇಕು, ಇಲ್ಲವೇ ಭೂಮಿಯ ಒಡಲನ್ನು ಕೊರೆದ ಕೊಳವೆ ಬಾವಿಯ ನೀರು ಸಹಾಯಕ್ಕೆ ಬರುತ್ತದೆ. ಇವೆಲ್ಲವೂ ಮಳೆರಾಯನ ಕೃಪೆಯಿಂದ ಭರ್ತಿಯಾಗಬೇಕು. ಈಗಾಗಲೇ ತಿಳಿಸಿದಂತೆ ಮಲೆನಾಡಿನ ಭಾಗದಲ್ಲಿ ಇಲ್ಲಿಯ ತನಕ ವಾರ್ಷಿಕ ಸರಾಸರಿ ಶೇಕಡ ೩೫ ಮತ್ತು ಕರಾವಳಿ ಭಾಗದಲ್ಲಿ ಶೇಕಡ ೪೦ರಷ್ಟು ಮಾತ್ರ ಮಳೆಯಾಗಿದೆ. ಈಗಾಗಲೇ ಕೃಷಿ ಜೀವನಕ್ಕೆ ವಿದಾಯ ಹೇಳಿ ಪಟ್ಟಣ ಸೇರುತ್ತಿರುವ ಹೊಸ ರೈತ ಪೀಳಿಗೆ ಒಂದು ಕಡೆಯಾದರೆ, ಅಳಿದುಳಿದ ರೈತಮಂದಿ ಮಳೆಗಾಗಿ ಆಕಾಶ ನೋಡುವಾಗ ಹಾದುಹೋಗುವ ಬಿಳಿಮೋಡಗಳಲ್ಲಿ ಬರಗಾಲದ ಚಿತ್ರಣ ಕಂಡುಬAದರೆ ಅಚ್ಚರಿಯಿಲ್ಲ. ಏಕೆಂದರೆ ಹವಾಮಾನ ತಜ್ಞರು ಎಚ್ಚರಿಸಿದಂತೆ, ಈ ವರ್ಷ ಮಳೆ ಕಡಿಮೆ ಸುರಿಯುವ ‘ಎಲ್ ನಿನೋ’ ಪ್ರಭಾವ ಈಗಾಗಲೇ ಕಂಡುಬರುತ್ತಿದೆ.

ಈ ಭೂಮಿಯ ಮೇಲೆ ಗಾಳಿ, ಮೋಡ-ಮಳೆಯ ವಾತಾವರಣ ಸೃಷ್ಟಿಯಾದಾಗಿನಿಂದಲೂ ಪ್ರತೀ ಎರಡರಿಂದ ಏಳು ವರ್ಷಗಳಿಗೆ ಒಂದು ಬಾರಿ ಎಲ್ ನಿನೋ, ಲಾ ನಿನೋಗಳು, ಬರಗಾಲ, ಅತಿವೃಷ್ಟಿ ಬರುತ್ತಾ-ಹೋಗುತ್ತಾ ಇರುತ್ತವೆ. ೨೦೧೮-೧೯ರಲ್ಲಿ ಅದಕ್ಕಿಂತಲೂ ಹಿಂದೆ ೧೯೬೨-೬೩ನೆ ಇಸವಿಗಳಲ್ಲಿ ಕೊಡಗಿನಲ್ಲಿ ಸಂಭವಿಸಿದ ವಿಪರೀತ ಮಳೆಯಿಂದ ಮನೆಗಳು ಕುಸಿದು, ಬೆಟ್ಟ-ಗುಡ್ಡಗಳು ಜಾರಿ ಸ್ಥಳಾಂತರ ಹೊಂದಿದ್ದು ಸಂಭವಿಸಿದAತೆ ೨೦೨೬ ರಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆಯಿದ್ದರೂ; ನಾವಿನ್ನೂ ಮಳೆಗಾಲದ ಹೊಸ್ತಿಲಲ್ಲಿ ಇದ್ದೇವೆ. ಕಳೆದ ಕೆಲವು ದಶಕಗಳಿಂದ ಮಳೆ ಸರಿಯಾಗಿ ಶುರುವಾಗುವುದು ಜೂನ್ ತಿಂಗಳ ಬದಲಾಗಿ ಜುಲೈ ನಂತರವೇ. ಆದುದರಿಂದ ಹವಾಮಾನ ತಜ್ಞರ ಹೇಳಿಕೆಯ ಬಗ್ಗೆ ನಿರಾಶರಾಗಬೇಕಿಲ್ಲ. ಏಕೆಂದರೆ ನಮ್ಮ ಆಷಾಡ, (ಆಟಿ/ಕಕ್ಕಡ) ತಿಂಗಳಲ್ಲಿ ಧಾರಾಳವಾಗಿ ಮಳೆ ಸುರಿಯುವ ಹಿರಿಯರ, ಅನುಭವಸ್ಥರ ನಂಬಿಕೆಯ ಭರವಸೆಯಿದೆ. ಅದೂ ಅಲ್ಲದೆ ಬೇಕಾದಾಗ, ಬೇಕಾದಲ್ಲಿ ಮೋಡ ಬಿತ್ತನೆಯಿಂದ ಮಳೆ ಸುರಿಸುವ ತಂತ್ರಜ್ಞಾನವೂ ಈಗ ಸಾಕಷ್ಟು ಮುಂದುವರೆದಿದೆ.

-ವಿಶ್ವನಾಥ್ ಎಡಿಕೇರಿ,

ಮೊ : ೬೩೬೦೩೪೯೯೩೮.