ಮಡಿಕೇರಿ, ಜೂ. ೨೬: ನಗರದ ಕೊಡಗು ವಿದ್ಯಾಲಯದಲ್ಲಿ ಹೆಸರಾಂತ ನಾಣ್ಯ ಸಂಗ್ರಹಕಾರ ಪಿ.ಕೆ. ಕೇಶವಮೂರ್ತಿ ಅವರಿಂದ ೧೭೭ನೇ ನಾಣ್ಯ ಮತ್ತು ನೋಟುಗಳ ಪ್ರದರ್ಶನ ಆಯೋಜಿತವಾಗಿತ್ತು.
ಕೊಡಗು ವಿದ್ಯಾಲಯದ ಗ್ರಂಥಾಲಯದಲ್ಲಿ ಪಿ.ಕೆ. ಕೇಶವಮೂರ್ತಿ ತಮ್ಮ ೧೭೭ನೇ ನಾಣ್ಯ ಮತ್ತು ನೋಟುಗಳ ಪ್ರದರ್ಶನವನ್ನು ಆಯೋಜಿಸಿದ್ದು, ೧ ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಪರೂಪದ ಹಾಗೂ ಐತಿಹಾಸಿಕ ಮಹತ್ವವುಳ್ಳ ನಾಣ್ಯಗಳು ಮತ್ತು ಕರೆನ್ಸಿ ನೋಟುಗಳನ್ನು ವೀಕ್ಷಿಸಿದರು. ಪಿ.ಕೆ. ಕೇಶವಮೂರ್ತಿ ಅವರು ತಮ್ಮ ನಾಣ್ಯ ಸಂಗ್ರಹದಲ್ಲಿನ ಕೆಲವು ಅಪರೂಪದ ನಾಣ್ಯಗಳನ್ನು ಹಾಗೂ ನಾಣ್ಯಶಾಸ್ತçಕ್ಕೆ ಸಂಬAಧಿಸಿದ ಮೂರು ಪುಸ್ತಕಗಳನ್ನು ಶಾಲೆಯ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿ, ಶಾಲಾ ಪ್ರಾಂಶುಪಾಲೆ ಸುಮಿತ್ರಾ ಅವರಿಗೆ ಹಸ್ತಾಂತರಿಸಿದರು.