ವೀರಾಜಪೇಟೆ, ಜೂ. ೨೬: ಸರಕಾರಿ ಪ್ರೌಢಶಾಲೆ ಬಿಳುಗುಂದದಲ್ಲಿ ರಾಷ್ಟಿçÃಯ ಆವಿಷ್ಕಾರ ಸಪ್ತಾಹ ೨೦೨೬-೨೭ರ ಅಂಗವಾಗಿ ನೀರಿನ ಸಂರಕ್ಷಣೆ ಕುರಿತು ವಿಶೇಷ ಕಾರ್ಯಕ್ರಮ ನಡೆಯಿತು.
ಗಿಡಕ್ಕೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಉಪನ್ಯಾಸ ನೀಡಿ ಮಾತನಾಡಿದ ವೀರಾಜಪೇಟೆಯ ವೈದ್ಯ ಹಾಗೂ ಪಕ್ಷಿತಜ್ಞ ಡಾ. ನರಸಿಂಹನ್ ಅವರು, ನೀರು ಜೀವದ ಮೂಲ. ಭೂಮಿಯ ಶೇ. ೭೧ ರಷ್ಟು ಭಾಗ ನೀರಿನಿಂದ ಆವೃತವಾಗಿದ್ದರೂ, ಕುಡಿಯಲು ಯೋಗ್ಯವಾದ ಸಿಹಿ ನೀರು ಕೇವಲ ಶೇ. ೨.೫ ರಿಂದ ೩ ರಷ್ಟು ಮಾತ್ರ ಲಭ್ಯವಿದೆ. ಜನಸಂಖ್ಯೆ ಹೆಚ್ಚಳ ಹಾಗೂ ಹವಾಮಾನ ವೈಪರಿತ್ಯದಿಂದ ತೀವ್ರ ನೀರಿನ ಅಭಾವ ಎದುರಾಗುತ್ತಿದೆ ಎಂದು ತಿಳಿಸಿದರಲ್ಲದೆ ನೀರನ್ನು ಸಂರಕ್ಷಿಸುವAತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕ ಡಾ. ರವಿ ಮಾತನಾಡಿ, ನೀರು ಅಮೂಲ್ಯ. ಕಾವೇರಿ ಹುಟ್ಟಿದ ನಾಡಲ್ಲಿ ಬಾಳುತ್ತಿರುವ ನಾವೆಲ್ಲರೂ ಪುಣ್ಯವಂತರು ಎಂದರು.
ಶಾಲೆಯ ಹಿರಿಯ ಶಿಕ್ಷಕಿ ಅರುಣ ಆನ್ಸಿ ಡಿಸೋಜ, ಸಹ ಶಿಕ್ಷಕಿ ಲೀಲಾವತಿ ವಿ.ಕೆ., ಭವ್ಯ ಪಿ.ಎಸ್. ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕ್ರಮದಲ್ಲಿ ಲಿನು ಎಸ್.ಜೆ., ಅನಿತಾ ಎಸ್.ಡಿ., ಸವಿತಾ ಮಹದೇವ ನಾಯಕ್, ರೂಪ ಲೋಕೇಶ್ ಉಪಸ್ಥಿತರಿದ್ದರು.