ಸೋಮವಾರಪೇಟೆ, ಜೂ. ೨೬: ಸಮೀಪದ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅಭಿಯಂತರ ಸೈಜನ್ ಕೆ. ಪೀಟರ್ ಅವರು ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿದರು.
ಪ್ರತಿವರ್ಷದಂತೆ ಈ ವರ್ಷವೂ ಕೂಡ ನೋಟ್ ಪುಸ್ತಕಗಳನ್ನು ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಮಾಜದಲ್ಲಿ ಸತ್ಪçಜೆಗಳಾಗಿ ಬಾಳಬೇಕು ಎಂದರು.
ಈ ಸಂದರ್ಭ ಪ್ರೌಢಶಾಲಾ ಸ್ಥಾಪನಾ ಸಮಿತಿಯ ಅಧ್ಯಕ್ಷ ಪಾಪೇಗೌಡ ಭಾಗವಹಿಸಿ ಮಾತನಾಡಿ, ಸರ್ಕಾರಿ ಪ್ರೌಢಶಾಲೆ ನೇರುಗಳಲೆಯು ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೇ. ೧೦೦ ಫಲಿತಾಂಶವನ್ನು ದಾಖಲಿಸಿ ಊರಿಗೆ ಕೀರ್ತಿ ತಂದಿದೆ ಎಂದರು.
ಶಾಲಾ ಮುಖ್ಯಶಿಕ್ಷಕಿ ರಾಜೇಶ್ವರಿ, ಸೋಮವಾರಪೇಟೆ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರತ್ನಕುಮಾರ್ ಕೆ.ಆರ್., ಉಮೇಶ್, ರತೀಶ್, ತೇಜಾಕ್ಷಿ, ಲಿಖಿತ, ಆಶಾ, ಭಾನುಮತಿ ಮತ್ತು ವಿದ್ಯಾರ್ಥಿಗಳು ಇದ್ದರು.