ಕುಶಾಲನಗರ, ಜೂ. ೨೬: ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಬಲವಂತದ ಮತಾಂತರ ಖಂಡಿಸಿ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಜೂ ೩೦ ರ ಜನಾಂದೋಲನ ಜಾಗೃತಿ ಜಾಥಾ ಕಾರ್ಯಕ್ರಮ ಸಂದರ್ಭ ಕುಶಾಲನಗರ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ ಎಂದು ಸಮಿತಿಯ ಪ್ರಮುಖ ಬಿ. ಅಮೃತ್ ರಾಜ್ ತಿಳಿಸಿದರು.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರದ ಕಾವೇರಿ ನಿಸರ್ಗಧಾಮದ ಎದುರುಗಡೆ ವಾಣಿಜ್ಯ ಸಂಕೀರ್ಣದ ಆವರಣದಲ್ಲಿ ನಡೆದಿರುವ ಮತಾಂತರ ಪ್ರಕರಣ ಮತ್ತು ಅಪ್ರಾಪ್ತ ಬಾಲಕನ ಸುನ್ನತ್ ಘಟನೆ ಖಂಡಿಸಿ ಜನಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ. ಜಾಗೃತಿ ಸಮಾವೇಶಕ್ಕೆ ಕುಶಾಲನಗರದ ವಿವಿಧ ಸಮುದಾಯಗಳ ಮುಖಂಡರು ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದರು.

ಅಂದು ಬೆಳಗಿನಿಂದ ಮಧ್ಯಾಹ್ನದ ತನಕ ಕುಶಾಲನಗರದ ವರ್ತಕರು ಅರ್ಧ ದಿನ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಜನಾಂದೋಲನ ಜಾಗೃತಿ ಕಾರ್ಯಕ್ರಮಕ್ಕೆ ಬೆಂಬಲ ಕೋರಲಾಗಿದೆ ಎಂದು ಆಗ್ರಹಿಸಿದರು. ಜನಾಂದೋಲನ ಸಭೆ ಅಂಗವಾಗಿ ಕುಶಾಲನಗರದ ಕಾರು ನಿಲ್ದಾಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಭಾಷಣಕಾರರಾಗಿ ಹಿಂದೂ ಸಮಾಜದ ಪ್ರಮುಖರಾದ ಭೋಜೇಗೌಡ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಅಪ್ರಾಪ್ತನ ಮತಾಂತರ ಪ್ರಕರಣದ ಹಿಂದೆ ಬಹುದೊಡ್ಡ ಜಾಲವಿದೆ. ಈಗಾಗಲೇ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಾಲಕನಿಗೆ ಸುನ್ನತ್ ಮಾಡಿಸಿದ ಕೇರಳದ ಮಂಜೇರಿಯಲ್ಲಿರುವ ಮುಸ್ಲಿಂ ಧರ್ಮ ಕೇಂದ್ರದ ಮಹಜರು ಹಾಗೂ ಸಮಗ್ರ ತನಿಖೆ ನಡೆಸಿ ಮುಟ್ಟುಗೋಲು ಹಾಕಬೇಕಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಕೂಡ ದಾಖಲಾಗಬೇಕಿದೆ. ಆರೋಪಿಗಳಿಗೆ ಸಂಬAಧಿಸಿದ ನಿಸರ್ಗಧಾಮದ ಬಳಿಯ ಹೋಂಸ್ಟೇ ಒಂದನ್ನು ಪರಿಶೀಲನೆ ನಡೆಸಿ ವಶಕ್ಕೆ ಪಡೆಯುವಂತೆ ಅಮೃತ್‌ರಾಜ್ ಆಗ್ರಹಿಸಿದರು.

ಪ್ರಕರಣ ಅಂತರರಾಜ್ಯ ಮಟ್ಟಕ್ಕೆ ಒಳಪಟ್ಟ ಕಾರಣ ಈ ಬಗ್ಗೆ ಎನ್‌ಐಎ ತನಿಖೆ ನಡೆಸಿ ದುಷ್ಕರ್ಮಿಗಳ ಜಾಲವನ್ನು ಭೇದಿಸುವಂತೆ ಒತ್ತಾಯಿಸಿದರು. ನಿರಂತರವಾಗಿ ನಡೆಯುತ್ತಿರುವ ಮತಾಂತರ, ಲವ್ ಜಿಹಾದ್, ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ ಕುರಿತಂತೆ ಸಮಗ್ರ ತನಿಖೆ ನಡೆಸುವುದು ಮತ್ತು ಜನರಲ್ಲಿ ಜಾಗೃತಿ ಮೂಡಿಸುವುದು ಜನಾಂದೋಲನ ಸಭೆಯ ಉದ್ದೇಶವಾಗಿದೆ ಹೊರತು ಯಾವುದೇ ಸಮುದಾಯದ ವಿರುದ್ಧ ಅಲ್ಲ ಎಂದು ಅವರು ಹೇಳಿದರು.

ಕುಶಾಲನಗರ ಗೌಡ ಸಮಾಜ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಮಾತನಾಡಿ, ಬೇರೆ ಬೇರೆ ಪ್ರದೇಶಗಳಲ್ಲಿ ವರದಿಯಾಗುತ್ತಿದ್ದ ಬಲವಂತದ ಮತಾಂತರ ಪ್ರಕರಣ ಕೊಡಗಿನ ಕುಶಾಲನಗರಕ್ಕೂ ಕಾಲಿಟ್ಟಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರ ವಿರುದ್ಧ ಹಿಂದೂ ಸಮುದಾಯ ಒಗ್ಗಟ್ಟಾಗಿ ಪ್ರತಿಭಟಿಸಬೇಕಿದೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಜನಜಾಗೃತಿ ಕಾರ್ಯಕ್ರಮದಲ್ಲಿ ಗೌಡ ಸಮುದಾಯ ಬಾಂಧವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.

ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಆರ್ಯ ವೈಶ್ಯ ಮಂಡಳಿ ಉಪಾಧ್ಯಕ್ಷ ಅಶೋಕ್, ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್. ರಾಜಶೇಖರ್, ದೇವಾಂಗ ಸಂಘದ ಅಧ್ಯಕ್ಷ ಡಿ.ವಿ. ರಾಜೇಶ್, ಕೊಡವ ಸಮಾಜ ಕಾರ್ಯದರ್ಶಿ ಸಂಜು ಬೆಳ್ಳಿಯಪ್ಪ ಅವರುಗಳು ಕೂಡ ಬಲವಂತದ ಮತಾಂತರ ಘಟನೆಯನ್ನು ಖಂಡಿಸಿದರು. ತಮ್ಮ ತಮ್ಮ ಸಮುದಾಯ ಬಾಂಧವರು ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು. ಪೊಲೀಸ್ ಇಲಾಖೆ ಪ್ರಕರಣಕ್ಕೆ ಸಂಬAಧಿಸಿದAತೆ ಮೂರು ಮಂದಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಘಟನೆಯಲ್ಲಿ ಸ್ಥಳೀಯ ಇಬ್ಬರು ಸೇರಿದಂತೆ ಕೇರಳದ ಮತಾಂತರ ಕೇಂದ್ರದ ವೈದ್ಯರು ಮತ್ತು ಕೆಲವು ನಿಗೂಢ ವ್ಯಕ್ತಿಗಳು ಪಾತ್ರವಹಿಸಿದ್ದಾರೆ. ಇವರನ್ನು ಪತ್ತೆಹಚ್ಚಿ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭ ಹಿಂದೂ ಸುರಕ್ಷಾ ಸಮಿತಿಯ ಪ್ರಮುಖರಾದ ಭರತ್ ಮಾಚಯ್ಯ, ಮಂಜುನಾಥ್ ಇದ್ದರು.