ಸಿದ್ದಾಪುರ, ಜೂ. ೨೬: ಮಾಲ್ದಾರೆ ಗ್ರಾಮದ ಕಲ್ಲಳ್ಳ ಸಮೀಪದ ಕೆರೆ ಯೊಂದರ ಬಳಿ ಚಿರತೆ ಓಡಾಡುತ್ತಿರುವ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆೆ.
ಅಚ್ಚುತ್ತ ಎಸ್ಟೇಟ್ ನಲ್ಲಿ ಎರಡು ಚಿರತೆಗಳು ಕಂಡುಬAದಿದ್ದು, ಈ ಪೈಕಿ ಒಂದು ಚಿರತೆಯು ಅಚ್ಚುತ್ತ ಕಾಫಿ ತೋಟಕ್ಕೆ ಸೇರಿದ ಮುಂಭಾಗದ ಕೆರೆಯ ಬಳಿ ಸಂಚರಿಸುತ್ತಿರುವ ದೃಶ್ಯ ಭಾಸ್ಕರ ಎಂಬವರ ಮನೆಯಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮರದಲ್ಲಿ ಸೆರೆಯಾಗಿದೆ. ಈ ಭಾಗದಲ್ಲಿ ಜನವಸತಿ ಪ್ರದೇಶದಲ್ಲಿ ಈ ಹಿಂದೆ ಹುಲಿ ಪ್ರತ್ಯಕ್ಷಗೊಂಡಿತ್ತು. ಅಲ್ಲದೆ ಜಾನುವಾರಗಳ ಮೇಲೆ ದಾಳಿ ನಡೆಸಿದ ಘಟನೆಯೂ ನಡೆದಿತ್ತು. ಇದೀಗ ಜನವಸತಿ ಪ್ರದೇಶದ ಬದಿಯಲ್ಲಿ ಚಿರತೆಗಳು ಸುತ್ತಾಡುತ್ತಿರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.