ಕುಶಾಲನಗರ, ಜೂ. ೨೭: ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ದೇವಿ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ವಾರ್ಷಿಕೋತ್ಸವ ಅಂಗವಾಗಿ ದೇವಾಲಯದಲ್ಲಿ ಹೋಮ ಹವನ ಸೇರಿದಂತೆ ಪೂಜಾ ಕೈಂಕರ್ಯಗಳು ನಡೆದವು. ಕುಶಾಲನಗರ ದೇವಾಲಯ ಒಕ್ಕೂಟ ಸಮಿತಿಯ ಪ್ರತಿನಿಧಿಗಳು ಫಲ ತಾಂಬೂಲದೊAದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಕಾವೇರಿ ನದಿಗೆ ತೆರೆಳಿ ನದಿಯಲ್ಲಿ ಗಂಗಾಪೂಜೆ ನಂತರ ಕಾವೇರಿ ನದಿಯಿಂದ ಕಳಸ ಹೊತ್ತು ಭಕ್ತಾದಿಗಳು ನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ದೇವಾಲಯಕ್ಕೆ ತೆರಳಿದರು.

ಮಧ್ಯಾಹ್ನ ೧೨.೩೦ಕ್ಕೆ ದೇವಾಲಯದಲ್ಲಿ ದೇವಿಗೆ ಪೂಜಾ ಕೈಂಕರ್ಯಗಳು ಜರುಗಿ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಅನ್ನಸಂರ್ತಪಣೆ ನಡೆಯಿತು. ಪೂಜಾ ಕಾರ್ಯಗಳನ್ನು ದೇವಸ್ಥಾನದ ಅರ್ಚಕ ಪ್ರಸನ್ನ ಕುಮಾರ್ ನೆರವೇರಿಸಿದರು. ವಾರ್ಷಿಕೋತ್ಸವ ಅಂಗವಾಗಿ ಮಡಿಲಕ್ಕಿ ಕೊಡುವ ಕಾರ್ಯಕ್ರಮವನ್ನು ದೇವಸ್ಥಾನದ ವತಿಯಿಂದ ಆಯೋಜಿಸಲಾಗಿತ್ತು.

ದೇವಾಂಗ ಸಂಘದ ಅಧ್ಯಕ್ಷ ಡಿ.ವಿ. ರಾಜೇಶ್, ಉಪಾಧ್ಯಕ್ಷ ಡಿ. ಆರ್. ಸೋಮಶೇಖರ್ ಡಿ.ವಿ. ಚಂದ್ರು, ಪ್ರಧಾನ ಕಾರ್ಯದರ್ಶಿ ಡಿ.ಆರ್. ಕೃಷ್ಣಕುಮಾರ್, ಖಜಾಂಚಿ ಡಿ.ಜಿ. ಪ್ರದೀಪ್, ಸಹ ಕಾರ್ಯದರ್ಶಿ ಡಿ. ವಿ. ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಡಿ. ಎನ್. ವಿನೋದ್, ಜಂಟಿ ಕಾರ್ಯದರ್ಶಿ ಡಿ. ಆರ್. ಜಯಂತ್, ಗೌರವ ಸಲಹೆಗಾರರಾದ ಡಿ.ಟಿ. ವಿಜಯೇಂದ್ರ, ಡಿ.ಎಸ್ ಜಗದೀಶ್, ಡಿ.ಎಸ್. ಕೋದಂಡರಾಮ, ಡಿ.ಟಿ. ನಾಗೇಂದ್ರ, ಡಿ.ಕೆ. ತಿಮ್ಮಪ್ಪ, ಡಿ.ಸಿ. ಜಗದೀಶ್, ಡಿ.ಸಿ. ಪ್ರಭಾಕರ್, ಹೆಚ್. ಎನ್. ಯೋಗೇಶ್, ಮಹಿಳಾ ಅಧ್ಯಕ್ಷರಾದ ಪದ್ಮ ಮಹೇಶ್, ಸಮಿತಿಯ ನಿರ್ದೇಶಕರು ಇದ್ದರು.

ವಾರ್ಷಿಕೋತ್ಸವ ಅಂಗವಾಗಿ ಸಂಜೆ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ದೇವಿಯ ವಿಗ್ರಹವನ್ನು ಪೂಜೆ ಸಲ್ಲಿಸಿ ಮೆರವಣಿಗೆ ನಡೆಯಿತು. ವೀರಗಾಸೆ ನೃತ್ಯ, ಮಂಗಳವಾದ್ಯದೊAದಿಗೆ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಮುಖ್ಯ ಬೀದಿಗಳಲ್ಲಿ ಸಾಗಿತು.