ಮಡಿಕೇರಿ, ಜೂ. ೨೭: ಕುಶಾಲನಗರ ಹಾಗೂ ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಯುವತಿಯರನ್ನು ಗುರಿಯಾಗಿಸಿಕೊಂಡು ಪ್ರೀತಿ ಎಂಬ ನೆಪದಲ್ಲಿ ವಂಚನೆ, ಶೋಷಣೆ ಮತ್ತು ಬಲವಂತದ ಮತಾಂತರಣ ಪ್ರಕರಣಗಳು ನಡೆಯುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತವಾಗುತ್ತಿದ್ದು, ಈ ವಿಷಯದ ಕುರಿತು ಜನಜಾಗೃತಿ ಮೂಡಿಸಲು ತಾ.೩೦ ರಂದು ಕುಶಾಲನಗರದಲ್ಲಿ ಬೃಹತ್ ಜನಾಂದೋಲನ ಸಭೆ ನಡೆಯಲಿದೆ. ಇದಕ್ಕೂ ಮುನ್ನು ಮೆರವಣಿಗೆ ನಡೆಯಲಿದೆ ಎಂದು ಕುಶಾಲನಗರ ಹಿಂದೂ ಸುರಕ್ಷಾ ಸಮಿತಿಯ ಸಂಚಾಲಕ ಅಮೃತ್ ರಾಜ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೆರವಣಿಗೆ ನಿಸರ್ಗಧಾಮದ ಸಮೀಪದಿಂದ ಪ್ರಾರಂಭವಾಗಿ, ಬಿ.ಎಂ. ರಸ್ತೆ ಮೂಲಕ ಸಾಗುತ್ತದೆ. ನಂತರ ಎಫ್ಎಂಸಿ ವೃತ್ತ, ಗಣಪತಿ ದೇವಸ್ಥಾನ ಸಮೀಪ ತಲುಪಿ, ಅಲ್ಲಿಂದ ಮುಂದುವರಿದು ಕಾರ್ ಸ್ಟ್ಯಾಂಡ್ನಲ್ಲಿ ಸಮಾವೇಶಗೊಂಡು ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು. ಅಂದು ಬೆಳಿಗ್ಗೆ ೬ ಗಂಟೆಯಿAದ ಮಧ್ಯಾಹ್ನ ೧:೩೦ ಗಂಟೆಯವರೆಗೆ ಕುಶಾಲನಗರದಲ್ಲಿ ಸ್ವಯಂಪ್ರೇರಿತ ಬಂದ್ ಆಚರಿಸಲಾಗುತ್ತಿದೆ ಎಂದು ಕೂಡ ಹೇಳಿದರು.
ಇತ್ತೀಚಿನ ಪ್ರಕರಣದ ಹಿನ್ನೆಲೆ, ಕೇರಳ ರಾಜ್ಯದ ಮಲ್ಲಪುರಂ ಜಿಲ್ಲೆಯ ಮಂಜೇರಿ ಗ್ರಾಮದ ‘ಸತ್ಯ ಸಾರಿಣಿ (ಒಚಿಡಿಞಚಿzuಟ ಊiಜಚಿಥಿಚಿ)’ ಸಂಸ್ಥೆಯಲ್ಲಿ ನಡೆದಿರುವುದಾಗಿ ಹೇಳಲಾಗುತ್ತಿದ್ದು, ಸಮಗ್ರ ತನಿಖೆ ಅಗತ್ಯವಿದೆ ಎಂದು ಅವರು ಹೇಳಿದರು.
ಈ ರೀತಿಯ ಘಟನೆಗಳು ಇನ್ನೂ ಅಧಿಕ ಸಂಖ್ಯೆಯಲ್ಲಿ ನಡೆದಿದ್ದು, ಇದರ ಬಗ್ಗೆ ಮಾಹಿತಿ ಬಹಿರಂಗಕ್ಕೆ ಕುಟುಂಬದವರು ಮುಜುಗರ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಗೋಷ್ಠಿಯಲ್ಲಿ ಸಹ ಸಂಚಾಲಕ ಗಣಿ ಪ್ರಸಾದ್, ವಸಂತ್ ರೈ, ಚಂದ್ರಶೇಖರ್ ಹೇರೂರು, ಪ್ರಶಾಂತ್ ಹಾಗೂ ಮಹಿಳಾ ಸದಸ್ಯೆ ಜ್ಯೋತಿ ಕುದುಪಜೆ ಇದ್ದರು.