ಗೋಣಿಕೊಪ್ಪ ವರದಿ, ಜೂ. ೨೭: ಮುಂದಿನ ವರ್ಷ ಕೊಡವ ಕ್ರಿಕೆಟ್ ಆತಿಥ್ಯ ವಹಿಸುತ್ತಿರುವ ಕೊಟ್ಟಂಗಡ ಕುಟುಂಬ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಪ್ರಮುಖರ ಕೊಟ್ಟಂಗಡ ಕ್ರಿಕೆಟ್ ನಮ್ಮೆ ಪೂರ್ವಭಾವಿ ಸಭೆ ಮಂಜುನಾಥ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ಕೊಡವ ಕ್ರಿಕೆಟ್ ಬೆಳ್ಳಿ ನಮ್ಮೆ ನಡೆಯುತ್ತಿದ್ದು ಪೂರಕ ಕಾರ್ಯಕ್ರಮ ಆಯೋಜನೆ ಮತ್ತು ಕ್ರಿಕೆಟ್ ನಮ್ಮೆ ಯಶಸ್ಸಿಗೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ, ಉಪಾಧ್ಯಕ್ಷ ಚೇರಂಡ ಕಿಶನ್, ಕಾರ್ಯದರ್ಶಿ ಕುಂಡ್ರAಡ ಬೋಪಣ್ಣ, ಖಜಾಂಚಿ ಕೊಕ್ಕೇಂಗಡ ರಂಜನ್, ನಿರ್ದೇಶಕ ಕೀತಿಯಂಡ ವಿವೇಕ್, ಎಂ. ದರ್ಶನ್ ಸೋಮಣ್ಣ, ಕೊಟ್ಟಂಗಡ ಒಕ್ಕ ಅಧ್ಯಕ್ಷ ಕೊಟ್ಟಂಗಡ ಮುದ್ದಪ್ಪ, ಕಾರ್ಯದರ್ಶಿ ಕೆ.ಸಿ. ಪ್ರಕಾಶ್, ನಮ್ಮೆ ಸಂಚಾಲಕ ಕೊಟ್ಟಂಗಡ ಸೂರಜ್ ಮಾದಪ್ಪ, ಪ್ರಮುಖರಾದ ಡಿಕ್ಕಿ ನಾಣಯ್ಯ, ರಾಜ ಸುಬ್ಬಯ್ಯ, ಪ್ಯಾರಿ, ವಿನೇಶ್, ಕೆ.ಪಿ. ಪ್ರಕಾಶ್, ಅಯ್ಯಪ್ಪ, ಕೆ.ಪಿ. ಪ್ರದೀಪ್, ಮಂಜುನಾಥ್, ರನ್ನು, ಬೋಪಯ್ಯ, ವೀಕ್ಷ ಇದ್ದರು.