ಕುಶಾಲನಗರ, ಜೂ. ೨೭: ಕುಶಾಲನಗರ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣೆ ನಡೆಯಿತು. ೮ ರಿಂದ ೧೦ನೇ ತರಗತಿ ತನಕ ಒಟ್ಟು ೧೭ ಸ್ಥಾನಗಳಿಗೆ ೩೨ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.

ಚುನಾವಣೆ ದಿನದ ಮೂರು ದಿನಗಳ ಹಿಂದೆ ನಾಮಪತ್ರಗಳು ಸಲ್ಲಿಕೆಯಾಗಿದ್ದು ಒಟ್ಟು ೧೦೪ ವಿದ್ಯಾರ್ಥಿಗಳ (ಮತದಾರರು) ನಡುವೆ ೧೭ ಸ್ಥಾನಗಳ ಆಯ್ಕೆಗೆ ಪ್ರಚಾರ ಬಿರುಸಿನಿಂದ ಸಾಗಿತ್ತು.

ದೇಶದ ವಿವಿಧ ಹಂತಗಳ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶಾಲಾ ಹಂತದಲ್ಲಿ ಈ ಚುನಾವಣೆ ಶಾಲಾ ಹಂತದ ಮಕ್ಕಳಲ್ಲಿ ನಡೆಸುವ ಪ್ರಕ್ರಿಯೆಯಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಪೆರುಮಾಳ್ ತಿಳಿಸಿದರು.

ಶಾಲೆಯ ಸಭಾಂಗಣದಲ್ಲಿ ನಡೆದ ಚುನಾವಣೆ ಬೆಳಿಗ್ಗೆ ೧೧ ರಿಂದ ಆರಂಭಗೊAಡು ಮಧ್ಯಾಹ್ನ ೧ ಗಂಟೆ ತನಕ ನಡೆಯಿತು. ಚುನಾವಣಾ ಪ್ರಕ್ರಿಯೆ ಹಿನ್ನೆಲೆ ಮುಖ್ಯೋಪಾಧ್ಯಾಯರು ಚುನಾವಣಾ ಅಧ್ಯಕ್ಷಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಆರು ಮಂದಿ ಶಿಕ್ಷಕ - ಶಿಕ್ಷಕಿಯರು ಮತಗಟ್ಟೆ ಅಧಿಕಾರಿಗಳಾಗಿ, ತಮ್ಮ ಅಭ್ಯರ್ಥಿಗಳ ಪರವಾಗಿ ಕೆಲವು ವಿದ್ಯಾರ್ಥಿಗಳು ಚುನಾವಣಾ ಏಜೆಂಟ್ ಆಗಿ ಕರ್ತವ್ಯ ನಿರ್ವಹಿಸಿದರು. ದೈಹಿಕ ಶಿಕ್ಷಣ ಅಧಿಕಾರಿ ಸೂಕ್ಷö್ಮ ಮತಗಟ್ಟೆ ಅಧಿಕಾರಿಯಾಗಿ ಹಾಗೂ ಭದ್ರತಾ ಸಿಬ್ಬಂದಿಯ ಪಾತ್ರವನ್ನು ವಿದ್ಯಾರ್ಥಿನಿಯೊಬ್ಬಳು ಪೊಲೀಸ್ ಸಮವಸ್ತçದೊಂದಿಗೆ ಕಾರ್ಯನಿರ್ವಹಿಸಿದ್ದು ಕಂಡುಬAತು.

ಚುನಾವಣಾ ಪ್ರಕ್ರಿಯೆ ಹಿನ್ನೆಲೆ ಅಣುಕು ಸಿಸಿ ಕ್ಯಾಮೆರಾ ವ್ಯವಸ್ಥೆ ಕೂಡ ಕಲ್ಪಿಸಲಾಗಿತ್ತು. ಓರ್ವ ವಿದ್ಯಾರ್ಥಿಗೆ ಮೂರು ವಿಭಾಗಗಳಿಗೆ ಮೂರು ಮತಗಳನ್ನು ಚಲಾಯಿಸುವ ಹಕ್ಕು ನೀಡಲಾಗಿತ್ತು. ಇವಿಎಂ ಮಾದರಿಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಸ್ಥಳೀಯ ಚುನಾವಣೆಗಳನ್ನು ಮೀರಿಸುವ ರೀತಿಯಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳು ಮತದಾನ ಪ್ರಕ್ರಿಯ ಸಂದರ್ಭ ಪಾಲ್ಗೊಂಡಿದ್ದ ದೃಶ್ಯ ಗೋಚರಿಸಿತು.

ಪ್ರಧಾನಮಂತ್ರಿ, ಉಪ ಪ್ರಧಾನಮಂತ್ರಿ ಹಾಗೂ ವಿವಿಧ ಖಾತೆಗಳ ಸಚಿವರಾಗಿ ಒಟ್ಟು ೧೭ ಮಂದಿ ಶಾಲಾ ಸಂಸತ್ತಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

ಫಲಿತಾಂಶ ನಂತರ ಪ್ರಮಾಣವಚನ, ನಂತರ ಸಂಸತ್ ಅಧಿವೇಶನದ ಕಾರ್ಯಕ್ರಮಗಳು ಕೂಡ ಜರುಗಲಿವೆ ಎಂದು ತಿಳಿಸಿದರು. ಮತದಾನದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಗುರುತಿನ ಚೀಟಿ ಹೊಂದುವುದು ಕಡ್ಡಾಯವಾಗಿತ್ತು.