ಕೂಡಿಗೆ, ಜೂ. ೨೮: ಹೆಬ್ಬಾಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಖೇತ್ ಬಚಾವೋ ಅಭಿಯಾನ ಮತ್ತು ಬೀಜೋಪಚಾರ ಆಂದೋಲನ ಮತ್ತು ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಕುರಿತು ಕೆವಿಕೆ ಕಾಲೇಜಿನ ವಿಜ್ಞಾನಿಗಳು ವಿಚಾರ ವಿನಿಮಯ ಮಾಡಿದರು.
ಗೋಣಿಕೊಪ್ಪಲು ಕೆ.ವಿ.ಕೆ. ಕಾಲೇಜಿನ ವಿಜ್ಞಾನಿ ಡಾ. ವೀರೇಂದ್ರ ಕುಮಾರ್ ರೈತರಿಗೆ ಸಮಗ್ರ ಮಾಹಿತಿಯನ್ನು ನೀಡಿದರು. ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಪಿ. ವೀರಣ್ಣ ಕೃಷಿ ಇಲಾಖೆಗೆ ಸಂಬAಧಪಟ್ಟ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.