ಕೋವರ್‌ಕೊಲ್ಲಿ ಇಂದ್ರೇಶ್

ಮಡಿಕೇರಿ, ಜು. ೩: ಕರ್ನಾಟಕ ಸರ್ಕಾರವು ಕಳೆದ ಮೇ ತಿಂಗಳಿನಲ್ಲಿ ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ಮದ್ಯಕ್ಕೆ ದರ ಆಧಾರಿತ ತೆರಿಗೆ ಬದಲಿಗೆ ಆಲ್ಕೋಹಾಲ್ ಪ್ರಮಾಣ ಆಧಾರಿತ ತೆರಿಗೆ ಪದ್ಧತಿಯನ್ನು (ಂಟಛಿohoಟ iಟಿ ಃeveಡಿಚಿge)ಜಾರಿಗೆ ತಂದಿತು. ವಿಶ್ವದ ಕೆಲ ದೇಶಗಳಲ್ಲಿ ಈ ರೀತಿಯ ತೆರಿಗೆ ಪದ್ಧತಿ ಮೊದಲಿನಿಂದಲೂ ಇದೆಯಾದರೂ ಭಾರತದಲ್ಲಿ ಇಂತಹ ಪದ್ದತಿಯನ್ನು ಜಾರಿಗೆ ತಂದಿರುವ ಮೊದಲ ರಾಜ್ಯ ಕರ್ನಾಟಕವೇ ಆಗಿದೆ.

ಈ ತೆರಿಗೆ ಪದ್ಧತಿಯಿಂದ ಪ್ರೀಮಿಯಂ ಬ್ರಾö್ಯಂಡ್‌ನ ಮದ್ಯದ ದರ ಕಡಿಮೆ ಆಗಿದ್ದು ಗಗನಕ್ಕೇರಿದ್ದ ಕೆಲ ಬ್ರಾö್ಯಂಡ್‌ಗಳ ಬಿಯರ್ ದರ ಕೂಡ ಕಡಿಮೆ ಆಗಿದ್ದು ಇದರಿಂದ ಬಿಯರ್ ಮಾರಾಟ ಏರಿಕೆ ದಾಖಲಿಸಿದೆ. ಕೊಡಗಿನಲ್ಲಿ ಮೊದಲಿನಿಂದಲೂ ಮದ್ಯ ಮಾರಾಟ ಅಬಕಾರಿ ಇಲಾಖೆ ಮಾಸಿಕ ಹಾಗೂ ವಾರ್ಷಿಕವಾಗಿ ನಿಗದಿಪಡಿಸಿರುವ ಗುರಿಗಿಂತಲೂ ಏರಿಕೆಯನ್ನೇ ದಾಖಲಿಸಿಕೊಂಡು ಬಂದಿದೆ. ಕೊಡಗಿನಲ್ಲಿ ಕಳೆದ ಮೇ ತಿಂಗಳಿನಲ್ಲಿ ಒಟ್ಟು ೬೯,೭೯೦ ಪೆಟ್ಟಿಗೆಗಳಷ್ಟು ಬಿಯರ್ ಮಾರಾಟವಾಗಿದ್ದು ೨೦೨೫ರ ಮೇ ತಿಂಗಳಿನಲ್ಲಿ ೫೪,೫೩೨ ಪೆಟ್ಟಿಗೆ ಬಿಯರ್ ಮಾರಾಟವಾಗಿತ್ತು. ೨೦೨೫ರ ಜೂನ್ ತಿಂಗಳಿನಲ್ಲಿ ೩೩,೩೫೮ ಪೆಟ್ಟಿಗೆಗಳಷ್ಟು ಬಿಯರ್ ಮಾರಾಟ ಆಗಿದ್ದರೆ, ಕಳೆದ ತಿಂಗಳು ಮಾರಾಟ ೫೮,೪೫೭ ಪೆಟ್ಟಿಗೆಗಳಿಗೆ ಜಿಗಿದಿದೆ. ೨೦೨೬ರ ಮೇ ತಿಂಗಳಿನಲ್ಲಿ ಇಲಾಖೆಯ ಬಿಯರ್ ಮಾರಾಟದ ಗುರಿ ಶೇ ೧೨೪ ಕ್ಕೆ ತಲುಪಿದ್ದರೆ ಜೂನ್ ತಿಂಗಳಿನಲ್ಲಿ ಗುರಿ ಮೀರಿ ಶೇಕÀಡ ೧೭೪ ರಷ್ಟು ಸಾಧನೆ ದಾಖಲಾಗಿದೆ. ಇದೇ ಅವಧಿಯಲ್ಲಿ ಮದ್ಯ ಮಾರಾಟದಲ್ಲಿ ಅಲ್ಪ ಹೆಚ್ಚಳ ದಾಖಲಾಗಿದೆ. ೨೦೨೫ರ ಮೇ ತಿಂಗಳಿನಲ್ಲಿ ೯೫೮೪೭ ಪೆಟ್ಟಿಗೆಗಳಷ್ಟು ಮದ್ಯ ಮಾರಾಟವಾಗಿದ್ದರೆ ೨೦೨೬ರ ಮೇ ತಿಂಗಳಿನಲ್ಲಿ ೮೩,೮೦೯ ಬಾಕ್ಸ್ ಮದ್ಯ ಮಾರಾಟ ಆಗಿದ್ದು ೧೨ ಸಾವಿರ ಬಾಕ್ಸ್ಗಳಷ್ಟು ಮಾರಾಟ ಕುಸಿತ ದಾಖಲಿಸಿದೆ. ಆದರೆ ೨೦೨೬ರ ಜೂನ್ ತಿಂಗಳಿನಲ್ಲಿ ಮಾರಾಟ ೮೮,೩೨೨ ಬಾಕ್ಸ್ ಗಳಿಗೆ ಏರಿಕೆ ದಾಖಲಿಸಿದ್ದು ೨೦೨೫ರ ಜೂನ್ ತಿಂಗಳಿನಲ್ಲಿ ೭೭,೭೬೪ ಬಾಕ್ಸ್ಗಳಷ್ಟು ಮದ್ಯ ಮಾರಾಟ ಆಗಿತ್ತು.

ಬಿಯರ್ ಮಾರಾಟದಿಂದ ಆದಾಯ ಗಳಿಕೆಯಲ್ಲೂ ಗುರಿ ಮೀರಿದ ಸಾಧನೆ ದಾಖಲಾಗಿದೆ. ೨೦೨೫ರ ಮೇ ತಿಂಗಳಿನಲ್ಲಿ ಬಿಯರ್ ಮಾರಾಟದಿಂದ ಇಲಾಖೆಗೆ ಒಟ್ಟು ೧೧,೪೮,೫೪,೪೪೮ ರೂಪಾಯಿಗಳಷ್ಟು ಆದಾಯ ದೊರಕಿದ್ದರೆ ೨೦೨೬ರ ಜೂನ್ ತಿಂಗಳಿನಲ್ಲಿ ಆದಾಯ ೧೩,೦೫,೪೭,೦೦೦ ಗೆ ಹೆಚ್ಚಳವಾಗಿದೆ. ೨೦೨೫ ರ ಜೂನ್ ತಿಂಗಳಿನಲ್ಲಿ ಒಟ್ಟು ಬಿಯರ್ ಮಾರಾಟದ ಆದಾಯ ೭,೦೪,೮೧,೬೫೬ ರೂಪಾಯಿ ಆಗಿದ್ದು ಇದು ಕಳೆದ ತಿಂಗಳಿನಲ್ಲಿ ಆದಾಯ ೧೦,೧೦,೩೨,೭೨೬ ರೂಪಾಯಿಗಳಿಗೆ ಜಿಗಿದಿದೆ. ಬಿಯರ್ ಮಾರಾಟದ ಆದಾಯ ಮೇ ತಿಂಗಳಿನಲ್ಲಿ ಶೇಕಡಾ ೧೧೪ ಆಗಿದ್ದರೆ ಕಳೆದ ತಿಂಗಳು ಶೇಕಡಾ ೧೪೩ ಕ್ಕೆ ಏರಿಕೆ ದಾಖಲಿಸಿದೆ.

ಕರ್ನಾಟಕ ಸರ್ಕಾರವು ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದ ಕೇವಲ ಆರು ವಾರಗಳಲ್ಲೇ, ರಾಜ್ಯದಲ್ಲಿ ಬಿಯರ್ ಮಾರಾಟ ಶೇಕಡಾ ೬೦ ರಷ್ಟು ಭಾರಿ ಏರಿಕೆ ದಾಖಲಾಗಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ. ಪರಿಣಾಮವಾಗಿ ಸರ್ಕಾರದ ಆದಾಯವೂ ಶೇಕಡಾ ೧೬ ರಷ್ಟು ವೃದ್ಧಿಯಾಗಿದೆ. ಅಬಕಾರಿ ಇಲಾಖೆ ಬಿಡುಗಡೆ ಮಾಡಿರುವ ಹೊಸ ದತ್ತಾಂಶಗಳ ಪ್ರಕಾರ, ಬಿಯರ್ ಮಾರಾಟದಲ್ಲಿ ಭಾರೀ ಏರಿಕೆಯಾಗಿದ್ದರೆ, ಮದ್ಯ ಮಾರಾಟವು ಬಹುತೇಕ ಯಥಾಸ್ಥಿತಿಯಲ್ಲಿದೆ.

ಕಡಿಮೆ ಆಲ್ಕೋಹಾಲ್ ಇರುವ ಮದ್ಯಕ್ಕೆ ಬೇಡಿಕೆ ಇದೆ. ಒಟ್ಟಾರೆ ವಹಿವಾಟಿನಲ್ಲಿ ಶೇ. ೨೦ರಷ್ಟು ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಬಿಯರ್ ವಿಭಾಗದ ಮಾರಾಟದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬೇಸಿಗೆ ಕಾಲವಾದ್ದರಿಂದ ಹಾಗೂ ಬೆಲೆ ಇಳಿಕೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಮದ್ಯ ಮಾರಾಟದ ಶೇಕಡಾವಾರು ಹೆಚ್ಚಳ ಬಿಯರ್‌ಗಿಂತ ಕಡಿಮೆಯಿದ್ದರೂ ಉತ್ತಮ ಅಂಕಿ-ಅAಶಗಳನ್ನು ದಾಖಲಿಸಿದೆ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.