ಮಡಿಕೇರಿ, ಜು. ೩ : ಒಂದಕ್ಕಿAತ ಹೆಚ್ಚು ಮತದಾರರ ಗುರುತಿನ ಚೀಟಿ ಹೊಂದುವ ಮೂಲಕ ಮತದಾನದ ಹಕ್ಕನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಅನ್ಬುಮಣಿ, ಭಾರತೀಯ ಚುನಾವಣಾ ಆಯೋಗ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಮತದಾರರ ಗುರುತಿನ ಚೀಟಿ ವಿಶೇಷ ತೀವ್ರ ಪರಿಷ್ಕರಣೆ ಸಂದರ್ಭ ಆದಿಮಸಂಜಾತ ಕೊಡವ ಮತದಾರರನ್ನು ರಕ್ಷಿಸಲು ಮತ್ತು ಹೊರಗಿನವರು ಹೊಂದಿರುವ ಒಂದಕ್ಕಿAತ ಹೆಚ್ಚು ವೋಟರ್ ಐಡಿಗಳನ್ನು ರದ್ದುಗೊಳಿಸಲು ಕೋರಿದ್ದಾರೆ.

ಒಂದಕ್ಕಿAತ ಹೆಚ್ಚು ವೋಟರ್ ಐಡಿ ಹೊಂದಿರುವವರ ಕಾರ್ಡ್ಗಳನ್ನು ಕಟ್ಟುನಿಟ್ಟಾಗಿ ರದ್ದುಗೊಳಿಸಬೇಕು ಮತ್ತು ಪ್ರಜಾಪ್ರತಿನಿಧಿ ಕಾಯ್ದೆ ೧೯೫೦ರ ಸೆಕ್ಷನ್ ೩೧ರ ಅಡಿಯಲ್ಲಿ ಅಂತಹ ಅಪರಾಧಿಗಳ ವಿರುದ್ಧ ಕಠಿಣ ದಂಡನಾತ್ಮಕ ಕ್ರಮವನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹೊರಗಿನ ಈ ಅತ್ಯಂತ ಶ್ರೀಮಂತ ವರ್ಗದ ಬಂಡವಾಳಶಾಹಿಗಳು ಹೊರಗಿನಿಂದ ಸಿಬ್ಬಂದಿ ಮತ್ತು ಕೆಲಸಗಾರರನ್ನು ಕರೆತರುತ್ತಾರೆ, ತಮಗೆ ಮಾತ್ರವಲ್ಲದೆ ಹೀಗೆ ಕರೆತಂದ ಅವರಿಗೂ ಕೊಡಗಿನಲ್ಲಿ ವೋಟರ್ ಐಡಿಗಳನ್ನು ಕೊಡಿಸಲಾಗುತ್ತದೆ. ಈ ಗುಂಪುಗಳು ಬೇರೆ ಬೇರೆ ರಾಜ್ಯಗಳಲ್ಲಿ ೫ ರಿಂದ ೬ ವೋಟರ್ ಐಡಿಗಳನ್ನು ಹೊಂದಿರುತ್ತಾರೆ ಎಂದು ಆರೋಪಿಸಿದ್ದಾರೆ.

ಟಿ.ಎನ್. ಶೇಷನ್ ಅವರು ಪರಿಣಾಮಕಾರಿ ಸುಧಾರಣೆಗಳನ್ನು ತಂದಿದ್ದರೂ, ಅವರು ಪರಿಚಯಿಸಿದ ಒಂದು ಅಸಮರ್ಪಕ ವ್ಯವಸ್ಥೆಯೆಂದರೆ ೫ ರಿಂದ ೬ ಹಂತಗಳಲ್ಲಿ ಚುನಾವಣೆ ನಡೆಸುವುದು. ಇದರ ಅನಗತ್ಯ ಲಾಭವನ್ನು ಪಡೆದುಕೊಳ್ಳುವ ಹೊರಗಿನವರು, ಕೊಡಗಿನಲ್ಲಿ ನಕಲಿ ವೋಟರ್ ಐಡಿಗಳ ಮೂಲಕ ಮತ ಚಲಾಯಿಸಿ, ನಂತರ ಅಸ್ಸಾಂ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕೇರಳ, ತಮಿಳುನಾಡು, ದೆಹಲಿ, ಮುಂಬೈ, ಹೈದರಾಬಾದ್‌ಗೆ ಪ್ರಯಾಣಿಸಿ ಅಲ್ಲಿಯೂ ಮತ್ತೆ ಮತ ಚಲಾಯಿಸುತ್ತಾರೆ. ಇದನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಶುದ್ಧೀಕರಿಸಬೇಕು. ಆಗ ಮಾತ್ರ “ಒಂದು ಮತ - ಒಂದು ಚುನಾವಣೆ” ಪರಿಕಲ್ಪನೆ ಯಶಸ್ವಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.