ಮಡಿಕೇರಿ, ಜು. ೩: ಮಡಿಕೇರಿಯ ಟೀಟೂಸ್ ಫೂಟ್ ಪ್ರಿಂಟ್ಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಪುಟಾಣಿ ಮಕ್ಕಳಿಗಾಗಿ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಲೇಖಕಿ ಕೂಡಕಂಡಿ ಓಂಶ್ರೀ ದಯಾನಂದ ಹಾಗೂ ಶಿಕ್ಷಕಿ ಪೈಕೇರ ಜ್ಯೋತಿ ಸೋಮಣ್ಣ ಅವರು ಕಥೆ ಮತ್ತು ಪದ್ಯಗಳ ಮೂಲಕ ಮಕ್ಕಳನ್ನು ರಂಜಿಸಿದರು. ನೀತಿ ಕಥೆಗಳನ್ನು ಹೇಳಿ ಪ್ರಸಿದ್ಧ ಪದ್ಯಗಳನ್ನು ಹಾಡಿ ಅಭಿನಯದೊಂದಿಗೆ ನಿರೂಪಿಸುವ ಮೂಲಕ ಮಕ್ಕಳಿಗೆ ಉತ್ತಮ ಮೌಲ್ಯಗಳು ಮತ್ತು ನೀತಿ ಪಾಠಗಳನ್ನು ಮನಮುಟ್ಟುವ ರೀತಿಯಲ್ಲಿ ತಿಳಿಸಿಕೊಟ್ಟರು.
ಆಂಗ್ಲ ಮಾಧ್ಯಮದ ಪುಟಾಣಿ ಮಕ್ಕಳಿಗೆ ಕನ್ನಡದಲ್ಲಿ ಪೌರಾಣಿಕ ಪಂಚತAತ್ರ ಕಥೆಗಳನ್ನು ಮನರಂಜನಾತ್ಮಕವಾಗಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥೆ ಮೆಲೋಡಿ, ಶಿಕ್ಷಕರಾದ ನಿಶಾ, ಕ್ರಿಸ್ಟಲ್, ಸಂಜನ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.