ಕಣಿವೆ, ಜು. ೫: ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ಗ್ರಾಮದ ಮುಖ್ಯ ವೃತ್ತಕ್ಕೆ ಅರೆಸೇನಾಪಡೆ ಯೋಧರ ವೃತ್ತ ಎಂದು ನಾಮಕರಣಕ್ಕೆ ಆಗ್ರಹಿಸಿ ಅರೆಸೇನಾಪಡೆ ಯೋಧರ ಒಕ್ಕೂಟದ ಪದಾಧಿಕಾರಿಗಳು ಕುಶಾಲನಗರದ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ದೇಶದ ಗಡಿಗಳಲ್ಲಿ ಸೇವೆ ಮಾಡಿ ನಿವೃತ್ತರಾಗಿರುವ ಹಾಗೂ ಸೇವೆಯಲ್ಲಿ ಇರುವ ಅರೆಸೇನಾಪಡೆ ಯೋಧರು ಕೊಡಗು ಜಿಲ್ಲೆಯಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಇದ್ದಾರೆ.

ಆದರೆ ಇದೂವರೆಗೂ ಕೊಡಗು ಜಿಲ್ಲಾಡಳಿತವಾಗಲೀ, ರಾಜ್ಯ ಸರ್ಕಾರವಾಗಲೀ ಅರೆಸೇನಾಪಡೆ ಯೋಧರ ಬಗ್ಗೆ ಕನಿಷ್ಟ ಸೌಜನ್ಯವನ್ನೂ ತೋರಿಲ್ಲ. ಮಾಜಿ ಯೋಧರಿಗೆ ಸಿಗಬೇಕಾದ ಮೂಲ ಸೌಲಭ್ಯಗಳು ದೊರಕುತ್ತಿಲ್ಲ. ಹಾಗಾಗಿ ಯೋಧರ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕುಶಾಲನಗರ ಭಾಗದ ಗುಮ್ಮನಕೊಲ್ಲಿ ವೃತ್ತಕ್ಕೆ ಅರೆಸೇನಾಪಡೆ ಯೋಧರ ವೃತ್ತ ನಾಮಕರಣ ಮಾಡುವ ಮೂಲಕ ಯೋಧರ ಸೇವೆ ಹಾಗೂ ತ್ಯಾಗವನ್ನು ಜಿಲ್ಲಾಡಳಿತ ಗೌರವಿಸಬೇಕು ಎಂದು ಯೋಧರ ಒಕ್ಕೂಟದ ಸಂಚಾಲಕ ಎಂ.ಎನ್. ಭೀಮಯ್ಯ, ಕಾರ್ಯದರ್ಶಿ ಬಿ.ಎಂ.ರವೀAದ್ರ, ನಿರ್ದೇಶಕರಾದ ಜಿ.ಕೆ. ದಿನೇಶ್ ಕುಮಾರ್, ಎಂ.ಎನ್.ಗೋಪಾಲಕೃಷ್ಣ, ಟಿ.ಆರ್. ಮಂಜುನಾಥ್, ಲೀಲವೇಣಿ, ಹರೀಶ್ ಕುಮಾರ್ ಗೌಡ ಮೊದಲಾದವರು ಆಗ್ರಹಿಸಿದ್ದಾರೆ.