ಕುಶಾಲನಗರ, ಜು. ೫: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕರವೇ ಜಿಲ್ಲಾಧ್ಯಕ್ಷ ದೀಪಕ್ ಅಧ್ಯಕ್ಷತೆಯಲ್ಲಿ ನಗರಾಧ್ಯಕ್ಷ ಯೋಗೇಶ್ ನೇತೃತ್ವದಲ್ಲಿ ಆರೋಗ್ಯ ಕೇಂದ್ರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವೈದ್ಯರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮಧುಸೂಧನ್, ತಾಲೂಕು ಆರೋಗ್ಯಾಧಿಕಾರಿ ಡಾ. ಇಂದೂಧರ್, ಆರೋಗ್ಯ ಕೇಂದ್ರದ ಡಾ. ಪ್ರಾಣೇಶ್, ಡಾ. ಶಿವಪ್ರಸಾದ್, ಡಾ. ಕೀರ್ತಿರಾಜು, ಡಾ. ಚಿರಸ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೃತಿ ಗಿರೀಶ್, ಮಡಿಕೇರಿ ಕ್ಷೇತ್ರದ ಪ್ರಮುಖ ಆನಂದ್, ತಾಲೂಕು ಅಧ್ಯಕ್ಷ ಆಸಿಫ್, ಉಪಾಧ್ಯಕ್ಷ ಪರಮೇಶ್, ನಗರ ಕಾರ್ಯದರ್ಶಿ ಗಣೇಶ್, ನಗರ ಉಪಾಧ್ಯಕ್ಷರಾದ ರವಿ, ಡಿ.ಎನ್. ಭವ್ಯ, ಸೋಮವಾರಪೇಟೆ ನಗರ ಕಾರ್ಯದರ್ಶಿ ರವೀಶ್, ತಾಲೂಕು ಯುವ ಘಟಕದ ಅಧ್ಯಕ್ಷ ಪುನೀತ್, ಹೋಬಳಿ ಅಧ್ಯಕ್ಷ ಪವನ್ ಮತ್ತಿತರರು ಇದ್ದರು.