ಸುಂಟಿಕೊಪ್ಪ, ಜು. ೫: ಪಂಚಾಯಿತಿ ನೌಕರರಿಗೆ ಕನಿಷ್ಟ ವೇತನ ಜಾರಿ ಮಾಡಲು ಒತ್ತಾಯಿಸಿ ತಾ. ೯ ರಂದು ಬೆಂಗಳೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಹೇಳಿದ್ದಾರೆ.
ಶುಕ್ರವಾರ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ವಿವಿಧ ಪಂಚಾಯಿತಿ ನೌಕರರ ಸಾಂಕೇತಿಕ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ನಮ್ಮ ಬೇಡಿಕೆಯನ್ನು ಮನ್ನಿಸಿ ರಾಜ್ಯ ಸರಕಾರ ದಿನಾಂಕ ೨೨.೦೫.೨೦೨೬ ರ ಅಧಿಸೂಚನೆಯಂತೆ ರೂ. ೨೧,೬೦೦ ಕನಿಷ್ಟ ವೇತನ ನಿಗದಿಗೊಳಿಸಿ ಆದೇಶ ಮಾಡಿದೆ. ಅಧಿಸೂಚನೆಯನ್ನು ಸರಕಾರ ಜಾರಿಗೆ ತಂದಿಲ್ಲ. ಇದರ ಜೊತೆಗೆ ೧೩ ಬೇಡಿಕೆಗಳನ್ನು ಮುಂದುರಿಸಿಕೊAಡು ತಾ. ೯ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಹೇಳಿದರು.
ಈ ಸಂದರ್ಭ ವಿಶ್ವ ರಂಗಸ್ವಾಮಿ, ಗಾಯತ್ರಿ, ಮಣಿಕಂಠ, ಮುನಿಸ್ವಾಮಿ, ರಾಮಚಂದ್ರ, ವಿಶ್ವ, ರವಿ, ರಾಜ, ಮುರುಗೇಶ್, ರಮೇಶ, ಸಣ್ಣ, ಚಂದ್ರ ಮಣಿ, ಮಂಜ ಸೇರಿದಂತೆ ಸುತ್ತಮುತ್ತಲಿನ ಪಂಚಾಯಿತಿಗಳ ನೌಕರರು ಪಾಲ್ಗೊಂಡಿದ್ದರು.