ಮುಳ್ಳೂರು, ಜು. ೫: ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಸಮೀಪದ ಬಾಣವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭ ಕಾರ್ಡ್ ಸಂಸ್ಥೆಯ ರೋಶನ್ ಡೇವಿಡ್, ಪ್ರಿಯಾ, ಶಾಲಾ ಮುಖ್ಯ ಶಿಕ್ಷಕಿ ವನಜಾಕ್ಷಿ, ಎಂಎಸ್ಡಬ್ಲೂö್ಯ ವಿದ್ಯಾರ್ಥಿಗಳಾದ ಮನೋಹರ್, ಚಂದು, ಸುಮಾ, ದರ್ಶನ್, ಅಂಗನವಾಡಿ ಶಿಕ್ಷಕಿ ಗೀತಾ ಮುಂತಾದವರು ಹಾಜರಿದ್ದರು.