ಮಡಿಕೇರಿ, ಜು. ೫: ರೋಟರಿ ಸೇರಿದಂತೆ ಯಾವುದೇ ಸಾಮಾಜಿಕ ಸೇವಾ ಸಂಸ್ಥೆಗಳ ಭದ್ರ ಬುನಾದಿಯೇ ಆ ಸಂಸ್ಥೆಯ ಉತ್ಸಾಹಿ ಸದಸ್ಯರಾಗಿದ್ದು, ಈ ನಿಟ್ಟಿನಲ್ಲಿ ಸಮಾನ ಮನಸ್ಕ, ಉತ್ಸಾಹಿ, ಸಮಾಜಮುಖಿ ಸದಸ್ಯರ ಸೇರ್ಪಡೆ ಅತ್ಯಗತ್ಯ ಎಂದು ಬೆಂಗಳೂರಿನ ರೋಟರಿ ಜಿಲ್ಲೆ ೩೧೯೧ ರ ಮಾಜಿ ಸಹಾಯಕ ಗವರ್ನರ್ ಪ್ರಕಾಶ್ ಬೆಳವಾಡಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಗೌಡ ಸಮಾಜ ಸಭಾಂಗಣದಲ್ಲಿ ಆಯೋಜಿತ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ನ ನೂತನ ಅಧ್ಯಕ್ಷ ಪೂಳಕಂಡ ರಾಜೇಶ್ ಮತ್ತು ಕಾರ್ಯದರ್ಶಿ ಡಾ. ಜಿ.ಡಿ. ಚೇತನ್ ಮತ್ತು ಆಡಳಿತ ಮಂಡಳಿ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.

ರೋಟರಿ ಸಂಸ್ಥೆಗಳು ಸಮಾಜದಲ್ಲಿ ಅಸಾಧ್ಯವಾಗಿದೆ ಎಂಬAತಹÀ ಯೋಜನೆಗಳನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃ ತ್ತವಾಗಬೇಕು. ಅಂತಹ ಸವಾಲನ್ನು ರೋಟರಿ ಸದಸ್ಯರು ಸ್ವೀಕರಿಸುವ ಮೂಲಕ ಬದ್ದತೆ ತೋರಬೇಕೆಂದು ಪ್ರಕಾಶ್ ಬೆಳವಾಡಿ ಕರೆ ನೀಡಿದರು. ಯಾವುದೇ ರೋಟರಿ ಸಂಸ್ಥೆಯು ಯಶಸ್ವಿ ಕಾರ್ಯಚಟುವಟಿಕೆಗಳ ಮೂಲಕ ಸಮಾಜಕ್ಕೆ ಉತ್ತಮ ಯೋಜನೆ ನೀಡಬೇಕೆಂದಾದಲ್ಲಿ ಅದಕ್ಕೆ ಸದಸ್ಯರ ಬಲ, ಬೆಂಬಲ ಅತ್ಯಗತ್ಯವಾಗಿದೆ. ಹೀಗಾಗಿ ಸಾಮಾಜಿಕ ಕಳಕಳಿ ಹೊಂದಿರುವ ಸದಸ್ಯರನ್ನು ರೋಟರಿಗೆ ಸೇರ್ಪಡೆ ಮಾಡುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಅಂತರರಾಷ್ಟಿçÃಯ ಸೇವಾ ಸಂಸ್ಥೆಯಾಗಿ ರೋಟರಿಯು ತಾನು ಸಾರ್ವಜನಿಕರಿಂದ ಸಂಗ್ರಹಿಸಿದ ಪ್ರತಿಯೊಂದು ರೂಪಾಯಿಯನ್ನೂ ಫಲಾನುಭವಿಗಳಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಾರ್ವಜನಿಕರ ದೇಣಿಗೆ ರೋಟರಿಯಲ್ಲಿ ದುರುಪಯೋಗವಾದ, ವ್ಯರ್ಥವಾದ ಯಾವುದೇ ಪ್ರಕರಣಗಳಿಲ್ಲದಿರುವುದೇ ರೋಟರಿಯ ಹೆಗ್ಗಳಿಕೆಯಾಗಿದೆ ಎಂದು ಪ್ರಕಾಶ್ ಬೆಳವಾಡಿ ನುಡಿದರು.

ರೋಟರಿ ಸಂಸ್ಥೆಯು ವ್ಯಾಪಾರಿ ಯೋಜನೆಗೂ ಪ್ರಾಮುಖ್ಯತೆ ನೀಡಬೇಕೆಂದು ಸಲಹೆ ನೀಡಿದ ಪ್ರಕಾಶ್ ಬೆಳವಾಡಿ, ಬ್ರೆಜಿಲ್ ದೇಶಕ್ಕೆ ಕೊಡಗಿನಿಂದ ರೋಟರಿಯಲ್ಲಿರುವ ಕಾಫಿ ಕೃಷಿಕರು ತೆರಳಿ ಅಲ್ಲಿನ ಕಾಫಿ ಉದ್ಯಮದ ಸ್ಥಿತಿಗತಿ ಅವಲೋಕಿಸಿ, ತರುವಾಯ ಅಲ್ಲಿನ ಕಾಫಿ ಉದ್ಯಮದ ಯಶಸ್ಸನ್ನು ಕೊಡಗಿನಲ್ಲಿಯೂ ಜಾರಿಗೊಳಿಸಲು ಸಾಧ್ಯವಿದೆ ಇಂತಹÀ ಹೊಸ ಪ್ರಯೋಗಗಳ ಬಗ್ಗೆ ರೋಟರಿ ಸದಸ್ಯರು ಚಿಂತನೆ ಹರಿಸಬೇಕೆಂದರು.

ರೋಟರಿ ವಲಯ ೬ರ ಸಹಾಯಕ ಗವರ್ನರ್ ಹೆಚ್.ಎಸ್. ವಸಂತ್ ಕುಮಾರ್ ಮಿಸ್ಟಿ ಹಿಲ್ಸ್ನ ವಾರ್ತಾಸಂಚಿಕೆ ರೋಟೋ ಮಿಸ್ಟ್ ಲೋಕಾರ್ಪಣೆಗೊಳಿಸಿ ಮಾತನಾಡಿ, ರೋಟರಿ ಜಿಲ್ಲೆ ೩೧೮೧ ರಲ್ಲಿ ನಮ್ಮ ಹಬ್ಬ ನಮ್ಮ ಸೇವೆ ಎಂಬ ವಿನೂತನ ಯೋಜನೆಯನ್ನು ಈ ವರ್ಷದಿಂದ ಜಾರಿಗೊಳಿಸಲಾಗಿದ್ದು, ಉತ್ಸವಗಳಲ್ಲಿ ರೋಟರಿಯು ಕೂಡ ವಿಭಿನ್ನ ರೀತಿಯ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಿದೆ ಎಂದರು. ರೋಟರಿ ವಲಯ ೬ರಲ್ಲಿಯೇ ೭೦ ಸದಸ್ಯರೊಂದಿಗೆ ಮಿಸ್ಟಿ ಹಿಲ್ಸ್ ಅತ್ಯಂತ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ವಸಂತ್ ಕುಮಾರ್ ಶ್ಲಾಘಿಸಿದರು.

ರೋಟರಿ ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್ ಮಾತನಾಡಿ, ರೋಟರಿಗೆ ಹೊಸ ಸದಸ್ಯರ ಸೇರ್ಪಡೆ ನಿಟ್ಟಿನಲ್ಲಿ ಪ್ರತೀ ಕ್ಲಬ್‌ಗಳೂ ಗಮನ ನೀಡಬೇಕೆಂದರು. ರೋಟರಿ ಮಿಸ್ಟಿ ಹಿಲ್ಸ್ನ ನೂತನ ಅಧ್ಯಕ್ಷ ಪಿ.ಆರ್.ರಾಜೇಶ್ ಮಾತನಾಡಿ, ಮುಂದಿನ ೧ ವರ್ಷಗಳ ಕಾಲ ಸಮಾಜಮುಖಿಯಾಗಿ ಅನೇಕ ಕಾರ್ಯಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಅಗತ್ಯ ಇರುವವರಿಗೆ ನೆರವು ನೀಡಲು ಮಿಸ್ಟಿ ಹಿಲ್ಸ್ ಬದ್ಧವಾಗಿದೆ ಎಂದು ನುಡಿದರು. ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್‌ನ ಜಿಲ್ಲಾ ಯೋಜನಾ ನಿರ್ದೇಶಕರಾದ ಅಂಕಾಚಾರಿ ಅವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.

ರೋಟರಿ ಮಿಸ್ಟಿ ಹಿಲ್ಸ್ ನ ನೂತನ ಕಾರ್ಯದರ್ಶಿ ಡಾ. ಚೇತನ್ ಜಿ.ಡಿ. ವಂದಿಸಿದ ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ರತ್ನಾಕರ್ ರೈ, ನಿರ್ಗಮಿತ ಕಾರ್ಯದರ್ಶಿ ಕ್ಯಾರಿ ಕಾರ್ಯಪ್ಪ ವೇದಿಕೆಯಲ್ಲಿದ್ದರು.

ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಬಿ.ಜಿ. ಅನಂತಶಯನ, ಡಾ.ಚೆರಿಯಮನೆ ಪ್ರಶಾಂತ್, ಅನಿಲ್ ಹೆಚ್.ಟಿ, ಜಿ.ಆರ್. ರವಿಶಂಕರ್, ಅನಿತಾ ಪೂವಯ್ಯ, ಗಾನಾ ಪ್ರಶಾಂತ್, ಶ್ರೀಹರಿರಾವ್, ಟಿ.ಕೆ.ಸುಧೀರ್, ರಶ್ಮಿದೀಪ, ಕಟ್ಟೆಮನೆ ಸೋನಜಿತ್, ನಿಶಾಂತ್ ಬೆಳ್ಯಪ್ಪ, ಸ್ನೇಹಿತ್, ಕಾರ್ಯಕ್ರಮ ನಿರ್ವಹಿಸಿದ್ದರು. ಕೊಡಗು, ಮೈಸೂರು ಜಿಲ್ಲೆಗಳ ವಿವಿಧ ರೋಟರಿ ಸಂಸ್ಥೆಗಳ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.