ಸೋಮವಾರಪೇಟೆ, ಜು.೫: ತಾಲೂಕಿನ ಮೂವತ್ತೊಕ್ಲು-ಕೋಟೆ ಬೆಟ್ಟದ ಸಂಪರ್ಕ ರಸ್ತೆಗೆ ಅಡ್ಡಲಾಗಿ ಮರವೊಂದು ಬಿದ್ದು, ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಭಾರೀ ಗಾಳಿ ಮಳೆಗೆ ಮರ ಬಿದ್ದಿದ್ದು, ವಾಹನಗಳ ಸಂಚಾರಕ್ಕೆ ತಡೆಯಾಗಿತ್ತು.

ಸ್ಥಳೀಯರು ಮರ ತೆರವಿಗೆ ಕ್ರಮವಹಿಸಿದ್ದು, ಅದೃಷ್ಟವಶಾತ್ ಮರ ಬಿದ್ದ ಸಂದರ್ಭ ಯಾವುದೇ ವಾಹನಗಳ ಓಡಾಟ ಇಲ್ಲದ್ದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ.