ಗೋಣಿಕೊಪ್ಪ ವರದಿ, ಜು. ೫ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವಿಶೇಷ ಕಾರ್ಯಕ್ರಮವಾಗಿರುವ ಪುಸ್ತಕ ಪತ್ತಾಯ ಯೋಜನೆಯನ್ನು ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆಯಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ವೇದಿಕೆ ಅಧ್ಯಕ್ಷ ಕೊಟ್ಟ್ಕತ್ತೀರ ಪಿ. ಸೋಮಣ್ಣ ತಿಳಿಸಿದ್ದಾರೆ.
ವೇದಿಕೆ ಸಭೆಯಲ್ಲಿ ಮಾತನಾಡಿ, ತಾ. ೮ ರಂದು ಕಾರ್ಯಕ್ರಮ ನಡೆಯಲಿದ್ದು, ಪುಸ್ತಕ ಪತ್ತಾಯ ಕಾರ್ಯಕ್ರಮದ ಮೂಲಕ ಕೊಡವ ಭಾಷೆ, ಆಚಾರ, ವಿಚಾರ, ಸಾಹಿತ್ಯ ಪೋಷಣೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಬೆಳಿಗ್ಗೆ ೧೧ ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹಾಗೂ ಆಡಳಿತ ಮಂಡಳಿಯವರು ಭಾಗವಹಿಸಲಿದ್ದಾರೆ. ನಿವೃತ್ತ ಮುಖ್ಯ ಶಿಕ್ಷಕಿ ಚಿರಿಯಪಂಡ ರುಕ್ಮಿಣಿ ನಾಣಯ್ಯ ಪುಸ್ತಕ ಪತ್ತಾಯ ದಾನಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ವೇದಿಕೆ ಸಂಸ್ಥಾಪಕ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ, ಮಹತ್ವಕಾಂಕ್ಷೆಯ ಪುಸ್ತಕ ಪತ್ತಾಯ ಕಾರ್ಯಕ್ರಮ ಸ್ಥಳೀಯ ಶಾಸಕ ಎ.ಎಸ್. ಪೊನ್ನಣ್ಣ ಅವರ ಗೃಹ ಕಚೇರಿಯಲ್ಲಿ ಆರಂಭಿಸಲಾಯಿತು. ಕೊಡವ ಐನ್‌ಮನೆಗಳಲ್ಲಿ ಕೂಡ ಯೋಜನೆಯನ್ನು ವಿಸ್ತರಿಸಲಾಗಿದೆ. ಪುಸ್ತಕ ಪ್ರತಿ ಮನೆಗೂ ಅವಶ್ಯ, ಮಕ್ಕಳು ಓದುವುದರಿಂದ ಕೊಡವ ಜ್ಞಾನ ಕೂಡ ವೃದ್ಧಿಸಲಿದೆ. ಬದುಕಿಗೆ ಮುಖ್ಯ ಅರಿವು ಕೂಡ ಮೂಡಲಿದೆ. ನಮ್ಮ ಸಂಸ್ಕೃತಿ, ಆಚಾರ, ವಿಚಾರ ಪೋಷಣೆಗೆ ಕಾರ್ಯಕ್ರಮ ಸಹಕಾರಿಯಾಗಲಿದೆ. ನಮ್ಮ ಸಂಸ್ಥೆಯ ಅಧ್ಯಕ್ಷ ಸೋಮಣ್ಣ ಕೂಡ ಪುಸ್ತಕ ಮತ್ತು ಸಂಸ್ಕೃತಿ ಪೋಷಣೆ ಜ್ಞಾನ ಹೊಂದಿದ್ದು, ವೇದಿಕೆಯಲ್ಲಿ ಸುಮಾರು ಶೇ. ೮೦ ರಷ್ಟು ಕೊಡವ ಮತ್ತು ಅಮ್ಮಕೊಡವ ಸಮಾಜದ ಸದಸ್ಯರಿರುವುದರಿಂದ ಹೆಚ್ಚು ಪ್ರಯೋಜನವಾಗಲಿದೆ ಎಂದು ತಿಳಿಸಿದರು. ಕಾರ್ಯದರ್ಶಿ ಚೇಂದಿರ ಬೋಪಣ್ಣ, ಜಂಟಿ ಕಾರ್ಯದರ್ಶಿ ನೆರೆಯಂಡಮ್ಮAಡ ಎಸ್. ಸುಬ್ರಮಣಿ, ನಿರ್ದೇಶಕಿ ಮೂಡೇರ ಸುಮಿ ಮುತ್ತಮ್ಮ, ಕೊಳ್ಳಿಮಾಡ ಚಿಪ್ಪಿ ಕಾರ್ಯಪ್ಪ, ಕೋದೇಂಗಡ ವಿಠಲ, ಗಾಂಡAಗಡ ಮಾಚಯ್ಯ, ಮತ್ರಂಡ ಚುಮ್ಮಯ್ಯ ಸಭೆಯಲ್ಲಿದ್ದರು.