ಮಡಿಕೇರಿ, ಜು. ೯: ಮಡಿಕೇರಿಯ ಕೇಂದ್ರೀಯ ವಿದ್ಯಾಲಯದಲ್ಲಿ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡುವಂಡ್ರ ಮೊನಾಲ್ ಲಕ್ಷ್ಮೀಪತಿ ಇದೇ ತಿಂಗಳು ಪಂಜಾಬ್ನಲ್ಲಿ ನಡೆಯುವ ರಾಷ್ಟç ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇತೀಚೆಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಷ್ಟಿçÃಯ ತಂಡಕ್ಕೆ ಆಯ್ಕೆಗೊಂಡಿರುವ ಮೊನಲ್ ಮುಂದಿನ ದಿನಗಳಲ್ಲಿ ಬೆಂಗಳೂರಿನ ಕೇಂದ್ರೀಯ ವಿದ್ಯಾಲಯ ಸಂಘಟನ್ ಪ್ರಾದೇಶಿಕ ಕಚೇರಿಯಿಂದ ಆಯೋಜಿಸುವ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಜುಲೈ ೧೫ ರಿಂದ ೧೯ ರವರೆಗೆ ಕೆವಿಎಸ್ ಚಂಡೀಗಢ್ ಪ್ರಾದೇಶಿಕ ಕಚೇರಿಯ ಉಸ್ತುವಾರಿಯಲ್ಲಿ ಪಂಜಾಬ್ನ ಫಗ್ವಾರಾದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊನಲ್ ಮರಗೋಡು ನಿವಾಸಿ ಬಡುವಂಡ್ರ ಲಕ್ಷಿö್ಮÃಪತಿ ಮತ್ತು ವಿದ್ಯಾ ದಂಪತಿ ಪುತ್ರಿ.