ಪೊನ್ನಂಪೇಟೆ, ಜು. ೧೧ : ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ೨೦೨೬-೨೭ನೇ ಸಾಲಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಚುನಾವಣೆ ಮೂಲಕ ನಡೆಸಲಾಯಿತು.

ಕಾರ್ಯದರ್ಶಿಯಾಗಿ ಶಿಪ್ರ ಕಾಳಪ್ಪ. ಎಂ., ಜಂಟಿ ಕಾರ್ಯದರ್ಶಿಯಾಗಿ ಕೆ.ಎಸ್. ಧ್ಯಾನ್ ಚಂಗಪ್ಪ, ಹರ್ಷಿಮ ಪಿ.ಜಿ., ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಜಯ್. ಕೆ., ಕ್ರೀಡಾ ಕಾರ್ಯದರ್ಶಿಯಾಗಿ ರುವಯ್ಸ್ ಮುಸ್ತಫಾ ಪಿ.ಎ. ಅವರು ಆಯ್ಕೆಯಾದರು.

ತರಗತಿ ಪ್ರತಿನಿಧಿಗಳಾಗಿ ಕಲಾ ವಿಭಾಗ ಪ್ರಥಮ ಪಿ.ಯು.ಸಿ ಲಿಶಾಲ್ ಎಸ್.ವಿ., ಎಸ್. ಅಮ್ಮಾನ್ ಸುಪ್ರಿಯಾ, ಕಲಾವಿಭಾಗ ದ್ವಿತೀಯ ಪಿ.ಯು.ಸಿ ಸವಿನ್ ವಿ.ಆರ್., ಶಿಪ್ರಾ ಕಾಳಪ್ಪ ಎಂ., ಪ್ರಥಮ ಪಿ.ಯು.ಸಿ. ವಾಣಿಜ್ಯ ಗಣಕ ವಿಜ್ಞಾನ ವಿಭಾಗದ ಹೆಚ್.ಪಿ. ಸಚಿನ್, ಕೃಪಾಶ್ರೀ ಪಿ.ವಿ, ದ್ವಿತೀಯ ಪಿ.ಯು.ಸಿ ಕೆ.ಎಸ್. ಧ್ಯಾನ್ ಚಂಗಪ್ಪ, ಹರ್ಷಿಮ ಪಿ.ಜಿ., ಪ್ರಥಮ ಪಿ.ಯು.ಸಿ. ವಾಣಿಜ್ಯ ವಿಭಾಗದ ಹರ್ಷ ಎಸ್.ವಿ., ಸಂಗೀತ ಎಂ., ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದ ನಿರ್ಮಿತ್ ಹೆಚ್.ವಿ., ವಿದ್ಯಾ ಪಿ.ಎಂ., ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದ ಕೌಶಲ್ ಎಸ್., ರಶ್ಮಿ ಸೋಮಣ್ಣ ಎಸ್.ಎಸ್., ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ರಂಜಿತ್ ಕೆ., ಮೋನಿಕಾ ಎಸ್. ಆಯ್ಕೆಯಾದರು. ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಅವರ ಮಾರ್ಗದರ್ಶನದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕರಾದ ವಿಪ್ರ ನೀಲಮ್ಮ, ಕರೀಷ್ಮ ಸುಧೀರ್ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.