ಸುಂಟಿಕೊಪ್ಪ, ಜು. ೧೧: ಜನತಾ ಕಾಲೋನಿಯಲ್ಲಿ ಮನೆಯೊಂದು ಮಹಿಳೆಗೆ ಧರೆಶಾಹಿಯಾಗಿದ್ದು, ಶಾಸಕ ಡಾ.ಮಂತರ್‌ಗೌಡ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿ ಸರಕಾರದಿಂದ ಹಾಗೂ ವೈಯಕ್ತಿಕವಾಗಿಯೂ ಸಹಾಯಹಸ್ತ ನೀಡುವ ಭರವಸೆ ನೀಡಿದರು.

ಜನತಾ ಕಾಲೋನಿಯ ನಿವಾಸಿ ಎಲಿಜಬೆತ್ ಎಂಬವರ ಮನೆಯು ಗಾಳಿ ಮಳೆಗೆ ಧರೆಶಾಹಿಯಾಗಿದ್ದು ಶಾಸಕರು ಭೇಟಿ ನೀಡಿ ಮನೆಯನ್ನು ಪರಿಶೀಲಿಸಿ ಕುಟುಂಬ ವರ್ಗಕ್ಕೆ ಸರಕಾರದಿಂದ ದೊರೆಯುವ ಸಲವತ್ತುಗಳನ್ನು ಅದಷ್ಟು ಬೇಗನೆ ಒದಗಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿ, ವೈಯಕ್ತಿಕ ಸಹಾಯ ಹಸ್ತವನ್ನು ನೀಡುವ ಮೂಲಕ ಸೂರು ಪುನರ್ ನಿರ್ಮಾಣಕ್ಕೆ ಸಹಕರಿಸುವುದಾಗಿ ಭರವಸೆಯಿತ್ತರು.

ಈ ಕುಟುಂಬವು ತುಂಬಾ ಅಪಾಯದಲ್ಲಿರುವ ಮನೆಯಲ್ಲಿಯೇ ವಾಸಿಸುತ್ತಿರುವು ದನ್ನು ಮನಗಂಡ ಶಾಸಕರು ಬಾಡಿಗೆ ಮನೆಯಲ್ಲಿ ನೆಲೆಸುವಂತೆ ಸೂಚಿಸಿದರಲ್ಲದೆ. ಅವರಿಗೆ ಬೇಕಾದ ಅಗತ್ಯ ನೆರವನ್ನು ಒದಗಿಸುವುದಾಗಿ ಹೇಳಿದರು.

ಕಂದಾಯ ಇಲಾಖೆಯ ಕಂದಾಯ ಪರಿವೀಕ್ಷಕರಾದ ಪ್ರಶಾಂತ್ ಅವರಿಗೆ ಸಂಬAಧಿಸಿದ ದಾಖಲಾತಿಗಳನ್ನು ಪರಿಶೀಲಿಸಿ ಕ್ರಮಕ್ಕೆ ಮುಂದಾಗಬೇಕೆAದು ಸೂಚಿಸಿದರು.

ಪಂಚಾಯಿತಿ ವತಿಯಿಂದ ಸಂತ್ರಸ್ತರಿಗೆ ಬೇಕಾದ ಸೂಕ್ತ ಸೌಲಭ್ಯವನ್ನು ಒದಗಿಸುವಂತೆ ಶಾಸಕರು ನಿರ್ದೇಶನ ನೀಡಿದರು.

ಜನತಾ ಕಾಲೋನಿಯಲ್ಲಿ ನೆಲೆಸಿರುವ ನಿವಾಸಿಗಳು ಕಾಲೋನಿಯ ಹಲವಾರು ಸಮಸ್ಯೆಗಳನ್ನು ಶಾಸಕರ ಬಳಿ ಪ್ರಸ್ತಾಪಿಸಿದರು.

ಈ ಸಂದರ್ಭ ನಗರ ಕಾಂಗ್ರೆಸ್ ಅಧ್ಯಕ್ಷ ರಫೀಕ್‌ಖಾನ್, ಗ್ರಾ.ಪಂ.ಮಾಜಿ ಅಧ್ಯಕ್ಷರುಗಳಾದ ಪಿ.ಎಫ್.ಸಬಾಸ್ಟೀನ್, ಶಿವಮ್ಮ ಮಹೇಶ್, ಮಾಜಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ರಜಾಕ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಮಣಿ ಹಾಗೂ ಕಾಲೋನಿಯ ನಿವಾಸಿಗಳು ಇದ್ದರು.