ಮಡಿಕೇರಿ, ಜು. ೧೧: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ತಾ. ೧೪ ರಂದು ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಕುಶಾಲನಗರ ಪಿರಾಮಲ್ ಫೈನಾನ್ಸ್ ಲಿಮಿಟೆಡ್, ಸರ್ಕಾರಿ ಪ್ರಾಥಮಿಕ ಶಾಲೆ ಎದುರು, ಎಸ್‌ವೈ ನಂ: ೯/೨ಮತ್ತು ೯/೩ ಬಿ.ಎಂ.ರಸ್ತೆ, ಶೌರ್ಯ ಮ್ಯಾನ್ಸಿಯನ್ ಕಾಂಪ್ಲೆಕ್ಸ್, ೧ನೇ ಮಹಡಿ, ಕುಶಾಲನಗರ. ಇಲ್ಲಿ ನೇರ ಸಂದರ್ಶನ ನಡೆಯಲಿದೆ.

ಈ ನೇರ ಸಂದರ್ಶನದಲ್ಲಿ ಕುಶಾಲನಗರ ಪಿರಾಮಲ್ ಫೈನಾನ್ಸ್ ಲಿಮಿಟೆಡ್ ಇವರು ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಈ ನೇರ ಸಂದರ್ಶನದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ., ಐಟಿಐ, ಡಿಪ್ಲೋಮ, ಪದವಿ ಹಾಗೂ ಸ್ನಾತಕೋತ್ತರ ಪದವಿ, ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಿ ಉದ್ಯೋಗದ ನೇರವನ್ನು ಪಡೆಯಬಹುದಾಗಿದೆ. ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ಅನುಭವ ಪ್ರಮಾಣಪತ್ರ (ಅನ್ವಯಿಸುವವರಿಗೆ ಮಾತ್ರ) ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಸಿ.ಬಿ. ಮಂಜುನಾಥ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಜಾಬ್ ಕೋಆರ್ಡಿನೇಟರ್ ೮೨೯೬೦೨೦೮೨೬ ಇವರನ್ನು ಸಂಪರ್ಕಿಸಬಹುದು.