ಚೆಟ್ಟಳ್ಳಿ ಪೊನ್ನತ್‌ಮೊಟ್ಟೆ ನಿವಾಸಿ ರಘು ಕಾವೇರಪ್ಪ (೮೪) ಅವರು ತಾ. ೧೧ ರಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
* ಎಡಪಾಲ ಗ್ರಾಮದ ನಿವಾಸಿ ಉಮ್ಮರ್ ಮಾಸ್ಟರ್ ಅವರ ಪುತ್ರಿ ಎಡಪಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಮರಿಯಂಬಿ (೫೬) ತಾ.೧೨ ರಂದು ನಿಧನರಾದರು.
* ಚೆಯ್ಯಂಡಾಣೆ ನರಿಯಂದಡ ಗ್ರಾಮದ ನಿವಾಸಿ ಪೊಕ್ಕುಳಂಡ್ರ ದಿ. ಕುಶಾಲಪ್ಪ ಅವರ ಪುತ್ರ ವಾಸುದೇವ (ಪ್ರಭು-೬೭) ತಾ. ೧೨ ರಂದು ನಿಧನರಾದರು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ.೧೩ ರಂದು (ಇಂದು) ಸ್ವಗ್ರಾಮದಲ್ಲಿ ನಡೆಯಲಿದೆ.
* ಕೊಳಕೇರಿ ಗ್ರಾಮದ ನಿವಾಸಿ ಕೇಟೋಳಿರ ದಿ. ಈರಪ್ಪ ಅವರ ಪತ್ನಿ ಬೊಳ್ಳಮ್ಮ (೮೮) ತಾ. ೧೧ ರಂದು ನಿಧನರಾದರು. ಮೃತರು ಮೂವರು ಪುತ್ರರನ್ನು ಅಗಲಿದ್ದಾರೆ.
* ಚೆಯ್ಯಂಡಾಣೆ ನರಿಯಂದಡ ನಿವಾಸಿ ಬೊವ್ವೇರಿಯಂಡ ದಿ.ಡಾಲ ಉತ್ತಪ್ಪ ಅವರ ಪುತ್ರ ಪ್ರಶಾಂತ್ ಮೊಣ್ಣಪ್ಪ (೩೯) ತಾ.೧೧ ರಂದು ನಿಧನರಾದರು.