ಮಡಿಕೇರಿ, ಜು. ೧೬: ಪರಿಚಿತ ಯುವತಿಯನ್ನು ನದಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ ಆರೋಪದಡಿ ನಾಪೋಕ್ಲು ಪೊಲೀಸರು ಯುವಕನೋರ್ವನ ಮೇಲೆ ಮೊಕದ್ದಮೆ ದಾಖಲಿಸಿ, ಬಂಧಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹೊದವಾಡ ನಿವಾಸಿ ಚೌರಿರ ಸಜನ್ ಬೋಪಣ್ಣ ಅವರ ಲೈನ್ಮನೆಯಲ್ಲಿ ವಾಸವಿರುವ ಪರಿಶಿಷ್ಟ ವರ್ಗಕ್ಕೆ ಸೇರಿದ ಸುಶೀಲ ಹಾಗೂ ದಿ.ಗಿರೀಶ್ ಎಂಬವರ ಪುತ್ರಿ ಹೆಚ್.ಜಿ.ಚೈತನ್ಯ ಎಂಬಾಕೆಯನ್ನು ಕಾವೇರಿ ನದಿಯ ಬೇತ್ರಿ ಸೇತುವೆ ಮೇಲಿನಿಂದ ತಳ್ಳಿ ಹಾಕಿ ಕೊಲೆ ಮಾಡಲು ಯತ್ನಿಸಿರುವ ಪ್ರಕರಣಕ್ಕೆ ಸಂಬAಧಿಸಿದAತೆ ವೀರಾಜಪೇಟೆ ನಿವಾಸಿ ಅಫ್ರಿದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜೂ.೩೦ರಂದು ಚೈತನ್ಯ ನೀಡಿರುವ ದೂರಿನ ಆಧಾರದಲ್ಲಿ ನಾಪೋಕ್ಲು ಪೊಲೀಸರು ಕೊಲೆ ಯತ್ನ, ಜಾತಿ ನಿಂದನೆ ಅಪರಾಧದಡಿ ಮೊಕದ್ದಮೆ ದಾಖಲಿಸಿಕೊಂಡು, ಜು.೧ರಂದು ಅಫ್ರಿದ್ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ. ಪ್ರಕರಣದ ಕುರಿತಾಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.