ಚೆಟ್ಟಳ್ಳಿ, ಜು. ೧೬: ಕಾವೇರಿ ಪದವಿ ಪೂರ್ವ ಕಾಲೇಜು, ವೀರಾಜಪೇಟೆ ಅರಣ್ಯ ಇಲಾಖೆ, ಆರ್‌ಆಯಿರ ನಾಡ್ ಪೂಮಾಲೆ ಮಂದ್ ಹಾಗೂ ಶ್ರೀ ಆದಿ ಬೈತ್ತೂರಪ್ಪ ಭಕ್ತ ಜನ ಸಂಘ, ಸಂಯುಕ್ತ ಆಶ್ರಯದಲ್ಲಿ ಆರ್‌ಆಯಿರನಾಡ್ ಪೂಮಾಲೆ ಮಂದ್‌ನಲ್ಲಿ ರಾಷ್ಟಿçÃಯ ಸೇವಾ ಯೋಜನೆ (ಎನ್‌ಎಸ್‌ಎಸ್) ಸ್ವಯಂಸೇವಕ ವಿದ್ಯಾರ್ಥಿಗಳಿಂದ ಸುಮಾರು ೧೦೦ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಪರಿಸರ ಸಂರಕ್ಷಣೆ ಹಾಗೂ ಹಸಿರು ವಾತಾವರಣ ನಿರ್ಮಾಣದ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ವಿವಿಧ ಸಂಘ-ಸAಸ್ಥೆಗಳ ಪ್ರತಿನಿಧಿಗಳು ಉತ್ಸಾಹದಿಂದ ಭಾಗವಹಿಸಿ ಗಿಡಗಳನ್ನು ನೆಟ್ಟು, ಅವುಗಳ ಸಂರಕ್ಷಣೆಯ ಪ್ರತಿಜ್ಞೆ ಕೈಗೊಂಡರು.

ಈ ಸಂದರ್ಭ ಶ್ರೀ ಆದಿ ಬೈತೂರಪ್ಪ ಭಕ್ತ ಜನ ಸಂಘದ ಅಧ್ಯಕ್ಷ ಅಮ್ಮಣಕುಟ್ಟಂಡ ಎ. ಕಿರಣ್ ಸುಬ್ರಮಣಿ, ಪದಾಧಿಕಾರಿಗಳಾದ ಮಂಡೆಪAಡ ರಿಶು ಕಾರ್ಯಪ್ಪ ಹಾಗೂ ಮುರುವಂಡ ಸವನ್ ಸೋಮಣ್ಣ, ಆರ್‌ಆಯಿರ ನಾಡ್ ಪೂಮಾಲೆ ಮಂದ್ ಸಮಿತಿಯ ಸದಸ್ಯರಾದ ಅಲ್ಲಪಂಡ ಎಸ್. ರವಿ ಬೋಪಣ್ಣ ಮತ್ತು ಪಟ್ಟಡ ಧನು ರಂಜನ್, ವೀರಾಜಪೇಟೆ ಅರಣ್ಯಾಧಿಕಾರಿ ರಾಘವ, ರಾಷ್ಟಿçÃಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಅನುಪಮ ತಿಮ್ಮಯ್ಯ, ಉಪನ್ಯಾಸಕಿ ಡೈನ ಸೋಮಯ್ಯ ಹಾಗೂ ಗಾಯತ್ರಿ ತಿಮ್ಮಯ್ಯ ಸೇರಿದಂತೆ ವಿದ್ಯಾರ್ಥಿಗಳು, ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.