ನಾಪೋಕ್ಲು, ಜು. ೧೭ : ಪಟ್ಟಣಕ್ಕೆ ದಿಢೀರ್ ಆಗಿ ಬಂದ ಜಿಂಕೆಯನ್ನು ಸ್ಥಳೀಯರು ಸೆರೆಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಕೊಡವ ಸಮಾಜದ ರಸ್ತೆಯಿಂದ ಓಡಿ ಬಂದ ಜಿಂಕೆ, ಬಸ್ ನಿಲ್ದಾಣ ಕ್ರಮಿಸಿ ಬೇತು ರಸ್ತೆಯಲ್ಲಿ ಓಡಾಡುತ್ತಿದ್ದಾಗ ಕೆನರಾ ಬ್ಯಾಂಕ್ ಬಳಿ ಸ್ಥಳೀಯರು ಜಿಂಕೆಯನ್ನು ಸೆರೆ ಹಿಡಿದಿದ್ದಾರೆ. ಇಸ್ಮಾಯಿಲ್ ಎಂ.ಎ., ಕೆ.ಕೆ. ರಫೀಕ್ ಜಿಂಕೆಯನ್ನು ಹಿಡಿದು ರಕ್ಷಿಸಿ ಶುಶ್ರೂಷೆ ಮಾಡಿ ಬಳಿಕ ಪೊಲೀಸ್ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಜಿಂಕೆಯನ್ನು ಅರಣ್ಯ ಇಲಾಖೆ ಸುಪರ್ದಿಗೆ ಒಪ್ಪಿಸಲಾಯಿತು. ನಂತರ ಭಾಗಮಂಡಲ ಅರಣ್ಯ ಇಲಾಖೆಯ ಅರಣ್ಯ ವೀಕ್ಷಕ ಕೆಂಪಣ್ಣ ಹಾಗೂ ಸಿಬ್ಬಂದಿ ಜಿಂಕೆಯನ್ನು ತಲಕಾವೇರಿ ವನ್ಯಜೀವಿ ಧಾಮಕ್ಕೆ ಕೊಂಡೊಯ್ದು ಬಿಟ್ಟರು.
-ದುಗ್ಗಳ ಸದಾನಂದ