ಪಾಲಿಬೆಟ್ಟ, ಜು. ೧೯: ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಮಾದಕ ವಸ್ತು ದುರುಪಯೋಗ ತಡೆಗಟ್ಟುವ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.

ಪಾಲಿಬೆಟ್ಟ ಉಪಠಾಣಾಧಿಕಾರಿ ಶ್ರೀನಿವಾಸ್ ಮಾದಕ ವಸ್ತುಗಳನ್ನು ಉಪಯೋಗಿಸುವುದರಿಂದ ದೈಹಿಕ ಶಕ್ತಿ ಕಡಿಮೆಯಾಗುವುದು, ಶರೀರಕ್ಕೆ ಹಲವು ಕಾಯಿಲೆಗಳು ಬಾದಿಸುವುದು, ಕುಟುಂಬದಲ್ಲಿ ಕಲಹ, ನೆಮ್ಮದಿ ಇಲ್ಲದ ಜೀವನ, ಇದರಿಂದ ಕಾಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇದನ್ನು ಮನಗಂಡು ಯಾವುದೇ ಮಾದಕ ವಸ್ತುಗಳನ್ನು ಸೇವಿಸಬಾರದೆಂದು ಕರೆ ನೀಡಿದರು.

ಪೊಲೀಸ್ ಸಿಬ್ಬಂದಿಗಳಾದ ಅಲೀಬ ಮತ್ತು ಸಜಿತ್ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಿದರು. ಕಾರ್ಯಕ್ರಮವನ್ನು ಆಯೋಜಿಸಿದ ಶಾಲಾ ಮುಖ್ಯೋಪಾಧ್ಯಾಯರಾದ ಅಶ್ರಫ್ ಅವರು ಪ್ರಾಸ್ತಾವಿಕವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭ ಶಾಲೆಯ ಶಿಕ್ಷಕರುಗಳಾದ ಮಮತಾ ಕಾಮತ್, ನಯನಕುಮಾರಿ, ಮದನ್ ಕುಮಾರ್, ಆಶಾ ಮೋಹನ್, ಆರತಿ ಎಸ್.ಪಿ., ಆರತಿ ಬಿ.ಎಸ್. ಇದ್ದರು.

ಇದೇ ದಿನ ಈ ಶಾಲೆಯ ಹಳೆಯ ವಿದ್ಯಾರ್ಥಿ ಪಿರಿಯಾಪಟ್ಟಣ ಶಾಲೆಯ ಶಿಕ್ಷಕರೂ ಆಗಿರುವ ಮಂಜುನಾಥ್ ಅವರು ವಿದ್ಯಾರ್ಥಿಗಳಿಗೆ ನೀಡಿದ ಕ್ರೀಡಾ ಸಮವಸ್ತçವನ್ನು ಉಪಠಾಣಾಧಿಕಾರಿ ಶ್ರೀನಿವಾಸ್ ಅವರು ವಿತರಿಸಿದರು.