ಸೋಮವಾರಪೇಟೆ, ಜು. ೧೯: ತಾಲೂಕು ಆಹಾರ ಇಲಾಖೆಯ ವತಿಯಿಂದ ತಾಲೂಕಿನ ಹಾರೇಹೊಸೂರು ಗ್ರಾಮದ ಹಾಡಿಯಲ್ಲಿ ಅಹವಾಲು ಸ್ವೀಕಾರ, ಸರ್ಕಾರದ ಸೌಕರ್ಯಗಳ ಮಾಹಿತಿ ಹಾಗೂ ಎಸ್‌ಐಆರ್ ಜಾಗೃತಿ ಕಾರ್ಯಾಗಾರ ನಡೆಯಿತು.

ಅಧಿಕಾರಿಗಳು ಹಾಡಿಗೆ ತೆರಳಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದರು. ಹಾಡಿಯಲ್ಲಿರುವ ಕುಟುಂಬಗಳಿಗೆ ಪಡಿತರ ಚೀಟಿ ಬಗ್ಗೆ ಪರಿಶೀಲಿಸಿ ಪಡಿತರ ಚೀಟಿ ವಿತರಿಸಲು ಆಗಬೇಕಾದ ಕ್ರಮಗಳನ್ನು ತಿಳಿಸಲಾಯಿತು.

ಕಂದಾಯ ಇಲಾಖೆಗೆ ಸಂಬAಧಪಟ್ಟ ಸರ್ಕಾರದ ಯೋಜನೆಗಳ ಬಗ್ಗೆ ಗ್ರಾಮ ಆಡಳಿತ ಅಧಿಕಾರಿ ಮಾಹಿತಿ ನೀಡಿದರು. ಸ್ಥಳದಲ್ಲಿಯೇ ಬಿಎಲ್‌ಓ ಸಿಬ್ಬಂದಿಗಳು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು, ಸದಸ್ಯರಾದ ಸಂದೀಪ್ ಹಾರೆಹೊಸೂರು, ರಂಗಸ್ವಾಮಿ, ಆಹಾರ ನೀರಿಕ್ಷಕಿ ಯಶಸ್ವಿನಿ, ಗ್ರಾಮ ಆಡಳಿತ ಅಧಿಕಾರಿ ಅಬ್ದುಲ್ ರಜಾಕ್, ಸಿಬ್ಬಂದಿ ಯಲ್ಲಾಲಿಂಗ, ವಿನೋದ್ ಕುಮಾರ್ ಮತ್ತು ಹಾಡಿ ಮುಖ್ಯಸ್ಥ ಗಣೇಶ್ ಸೇರಿದಂತೆ ನಿವಾಸಿಗಳು ಹಾಜರಿದ್ದರು.