ಮಡಿಕೇರಿ, ಜು. ೨೧: ಕೊಡಗು ಕಲಾವಿದರ ಸಂಘದ ಸಾಮಾನ್ಯ ಸಭೆ ಮತ್ತು ೨೦೨೬-೩೦ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ವೀರಾಜಪೇಟೆಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಕಲಾವಿದ ವಾಂಚಿರ ವಿಠಲ್ ನಾಣಯ್ಯ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಈರಮಂಡ ಹರಿಣಿ ವಿಜಯ್, ಕಾರ್ಯದರ್ಶಿಯಾಗಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಖಜಾಂಚಿಯಾಗಿ ಕಾಡ್ಯಮಾಡ ಸುಮನ್, ಸಹ ಕಾರ್ಯದರ್ಶಿಯಾಗಿ ಮಲ್ಲಮಾಡ ಶ್ಯಾಮಲ ಸುನಿಲ್, ನಿರ್ದೇಶಕರುಗಳಾಗಿ ಸೋಮೆಯಂಡ ಎಸ್ ಬೆಳ್ಯಪ್ಪ, ಬಿದ್ದಂಡ ಉತ್ತಮ್ ಪೊನ್ನಪ್ಪ, ಕಾಳಮಂಡ ಜಗತ್, ಟಿ.ಡಿ ಮೋಹನ್, ಚೇನಂಡ ಗಿರೀಶ್ ಪೂಣಚ್ಚ, ಪಟ್ಟಡ ಸಿ. ಧನು ರಂಜನ್ ಹಾಗೂ ಜಾದೂಗರ್ ವಿಕ್ರಂ ಶೆಟ್ಟಿ ಆಯ್ಕೆಯಾದರು. ಸಂಚಾಲಕರಾಗಿ ನೆರವಂಡ ಉಮೇಶ್, ಸಲಹಾ ಸಮಿತಿಯ ನಿರ್ದೇಶಕರುಗಳಾಗಿ ಬಿ.ಜಿ. ಅನಂತಶಯನ ಹಾಗೂ ಅವರೆಮಾದಂಡ ಶರಣ್ ನೇಮಕಗೊಂಡರು.
ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ವಾಂಚಿರ ವಿಠಲ್ ನಾಣಯ್ಯ ಅವರು, ಸರ್ವ ಸದಸ್ಯರು ಹಾಗೂ ಕಲಾವಿದರ ಸಹಕಾರದೊಂದಿಗೆ ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸಿ, ಕಲಾವಿದರ ಹಿತಾಸಕ್ತಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಕಲ್ಪ ವ್ಯಕ್ತಪಡಿಸಿದರು.
ಉಪಾಧ್ಯಕ್ಷೆ ಹರಿಣಿ ವಿಜಯ್, ಕಾರ್ಯದರ್ಶಿ ರಶ್ಮಿ ಕಾರ್ಯಪ್ಪ, ನಿರ್ದೇಶಕರಾದ ಬೋಸ್ ಬೆಳ್ಳಿಯಪ್ಪ, ಬಿ.ಜಿ. ಅನಂತಶಯನ, ನೆರವಂಡ ಉಮೇಶ್, ಉತ್ತಮ್, ಆಂಡಮಾಡ ಪವನ್, ಪ್ರಭಾ ನಾಣಯ್ಯ, ಸಂಕೇತ್ ಶಿವಪ್ಪ ಅವರುಗಳು ಮಾತನಾಡಿದರು.
ಗಿಡಕ್ಕೆ ನೀರೆರೆಯುವ ಮೂಲಕ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಲಾಯಿತು. ಸಂಘದ ಸದಸ್ಯೆ ಹಿರಿಯ ಕಲಾವಿದೆ ತಾತಂಡ ಪ್ರಭಾ ನಾಣಯ್ಯ ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ವೀರಾಜಪೇಟೆಯ ಕೆ.ಕೆ. ಗ್ರೂಪ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ನಿರ್ಗಮಿತ ಸ್ಥಾಪಕ ಅಧ್ಯಕ್ಷÀ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು, ೨೦೨೧ರಲ್ಲಿ ಸಂಘ ನೋಂದಣಿಯಾದ ನಂತರ ಸಂಘದ ಬೆಳವಣಿಗೆಗೆ ಸಮಿತಿಯ ಸದಸ್ಯರು, ಕಲಾವಿದರು ಹಾಗೂ ಹಿತೈಷಿಗಳು ನೀಡಿದ ಸಹಕಾರವನ್ನು ಸ್ಮರಿಸಿದರು.
ಮುಂದಿನ ದಿನಗಳಲ್ಲಿಯೂ ನೂತನ ಆಡಳಿತ ಮಂಡಳಿಗೆ ಇದೇ ರೀತಿಯ ಬೆಂಬಲ ನೀಡುವಂತೆ ಮನವಿ ಮಾಡಿದರು. ಕೊಡಗಿನ ಪ್ರತಿಭಾವಂತ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆಯುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಹಾಗೂ ಸಿನಿಮಾ, ಸಂಗೀತ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ಇನ್ನಷ್ಟು ಬೆಳವಣಿಗೆ ಹೊಂದಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಈರಮಂಡ ಹರಿಣಿ ವಿಜಯ್ ಅವರು ೨೦೨೧ರಿಂದ ೨೦೨೬ರವರೆಗೆ ಸಂಘವು ಕೈಗೊಂಡ ವಿವಿಧ ಚಟುವಟಿಕೆಗಳ ಬಗ್ಗೆ ವಿವರಿಸಿ ಲೆಕ್ಕಪತ್ರ ಮಂಡಿಸಿದರು. ಸಂಘದ ಅಭಿವೃದ್ಧಿಗೆ ಸಂಬAಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಸಂಘದ ಮಾಜಿ ಖಜಾಂಚಿ ಅಜ್ಜಮಕ್ಕಡ ವಿನು ಕುಶಾಲಪ್ಪ, ಹಿರಿಯ ಕಲಾವಿದೆ ಚೆರುವಾಳಂಡ ಸುಜಲ ನಾಣಯ್ಯ, ರಾಷ್ಟç ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳÀ ಕಲಾವಿದ ಸದಸ್ಯರುಗಳು ಉಪಸ್ಥಿತರಿದ್ದರು. ಚೆರುವಾಳಂಡ ಸುಜಲಾ ನಾಣಯ್ಯ ಪ್ರಾರ್ಥಿಸಿದರು, ಟಿ.ಡಿ. ಮೋಹನ್ ಸ್ವಾಗತಿಸಿದರು, ಜಾದೂಗರ್ ವಿಕ್ರಂ ಶೆಟ್ಟಿ ನಿರೂಪಿಸಿದರು, ಮಲ್ಲಮಾಡ ಶ್ಯಾಮಲ ಸುನಿಲ್ ವಂದಿಸಿದರು.