ಸೋಮವಾರಪೇಟೆ, ಜು. ೨೩: ಇನ್ನರ್ ವೀಲ್‌ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಜೀವನಾಧಾರ ಯೋಜನೆಯ ಡಯಾಲಿಸಿಸ್ ಸಪ್ತಾಹದ ಅಂಗವಾಗಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಲ್ವರು ಡಯಾಲಿಸಿಸ್ ರೋಗಿಗಳಿಗೆ ಸಹಾಯ ಧನ ನೀಡಲಾಯಿತು.
ಕ್ಲಬ್‌ನ ಅಧ್ಯಕ್ಷೆ ಲತಾ ಮಂಜು ಮಾತನಾಡಿ, ‘ಸೇವೆ ಸಮ್ಮ ಸಂಸ್ಕೃತಿ ಸಮಾಜಸೇವೆ ನಮ್ಮ ಸಂಕಲ್ಪ’ ಧ್ಯೇಯದೊಂದಿಗೆ ಸಂಸ್ಥೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ. ಕ್ಲಬ್ ನ ಸದಸ್ಯರ ನಿಸ್ವಾರ್ಥ ಸೇವೆಯಿಂದ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಕ್ಲಬ್‌ನ ಕಾರ್ಯದರ್ಶಿ ವನಿತಾ ಜಯರಾಮ್, ಖಜಾಂಚಿ ಲತಾ ನಾಗೇಶ್, ಎಡಿಟರ್ ರಾಜೇಶ್ವರಿ ಸುರೇಶ್, ಐಎಸ್‌ಒ ದಿವ್ಯ ದಯಾಕರ್ ಇದ್ದರು. ಇದೇ ಸಂದರ್ಭ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಜಮೀರ್ ಅಹಮ್ಮದ್ ಹಾಗೂ ಡಯಾಲಿಸಿಸ್ ಘಟಕದ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.