ಕಡಂಗ, ಜು. ೨೩: ಕೂಡಿಗೆಯ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತç ಹಾಗೂ ಶೂಗಳನ್ನು ನೀಡುವ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಅಧ್ಯಕ್ಷತೆಯನ್ನು ಶಾಲೆಯ ವ್ಯವಸ್ಥಾಪಕ ಎಂ.ಬಿ. ಮೊಣ್ಣಪ್ಪ ವಹಿಸಿದ್ದರು. ಸಮಾರಂಭದಲ್ಲಿ ರೋಟರಿ ಕ್ಲಬ್ ಕುಶಾಲನಗರದ ಅಧ್ಯಕ್ಷ ರುದ್ರೇಶ್ ಪಟೇಲ್ ಹಾಗೂ ಸದಸ್ಯರುಗಳು ವಿದ್ಯಾರ್ಥಿಗಳಿಗೆ ಸಮವಸ್ತçಗಳನ್ನು ವಿತರಿಸಿದರು.

ದಾನಿಗಳಾದ ಸೋಮವಾರಪೇಟೆಯ ಉದ್ಯಮಿ ಪುರುಷೋತ್ತಮ್, ನಿವೃತ್ತ ನೌಕರರಾದ ರಘು, ಸುನಿತಾ ಮಹೇಶ್ ಹಾಗೂ ರಾಗ ರಂಜಿನಿ ಸಂಚಾಲಕರಾದ ಚರಣ್, ಸುರೇಶ್, ರುದ್ರೇಶ್ ಪಟೇಲ್ ಅವರಿಗೆ ಸನ್ಮಾನ ಮಾಡಲಾಯಿತು. ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಅಪ್ಪಣ್ಣ, ಅರುಣ್ ಕುಮಾರ್ ಬಿ.ವಿ., ಕೆ.ಎನ್. ಮಂಜುನಾಥ್, ಕೆ.ಸಿ. ದೇವಯ್ಯ, ರೋಟರಿ ಕ್ಲಬ್‌ನ ಸದಸ್ಯರು, ಶಾಲಾ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಕ್ಷಕಿ ಹೇಮಮಾಲಿನಿ ಸ್ವಾಗತಿಸಿ, ನಿರೂಪಣೆ ಶಿಕ್ಷಕ ಎ.ಪಿ. ಸೋಮಯ್ಯ ನೆರವೇರಿಸಿದರು. ಮುಖ್ಯ ಶಿಕ್ಷಕಿ ಪುಷ್ಪ ಎನ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ರೂಪಕಲಾ ವಂದಿಸಿದರು.