ಐಗೂರು, ಜು. ೨೩: ಹಸಿರು ಬಣ್ಣದ ಮಹತ್ವದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಗ್ರೀನ್ ಡೇ ಎಂಬ ವಿಶೇಷ ಕಾರ್ಯಕ್ರಮವನ್ನು ಕಾಜೂರು ಸರಕಾರಿ ಶಾಲೆಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಆಂಗ್ಲ ಮಾಧ್ಯಮದ ವಿಭಾಗದ ಎಲ್‌ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಗಳ ವಿದ್ಯಾರ್ಥಿಗಳು ಹಸಿರು ಬಣ್ಣದ ಉಡುಪು ಧರಿಸಿ ಆಗಮಿಸಿದ್ದರು. ಹಸಿರು ಬಣ್ಣದ ಕ್ಯಾಪ್ಸಿಕಂ, ಬೆಂಡೆಕಾಯಿ, ಕಲ್ಲಂಗಡಿ, ಸೌತೆಕಾಯಿ ಸೇರಿದಂತೆ ಮರಗಳ ಚಿತ್ರಗಳನ್ನು ಬಿಡಿಸಿ ಪ್ರದರ್ಶಿಸಿದರು. ಮುಖ್ಯ ಶಿಕ್ಷಕಿ ಸರಳ ಕುಮಾರಿ ಮಾತನಾಡಿ, ಗ್ರೀನ್ ಡೇ ಎಂದರೆ ಹಸಿರು ಬಣ್ಣದ ಮಹತ್ವ ಹಾಗೂ ಪರಿಸರ ಸಂರಕ್ಷಣೆಯ ಸಂದೇಶಗಳನ್ನು ಮಕ್ಕಳಿಗೆ ತಲುಪಿಸುವ ಶೈಕ್ಷಣಿಕ ಕಾರ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಸರಳಕುಮಾರಿ, ಶಿಕ್ಷಕಿ ಅನಸೂಯ, ಶಿಕ್ಷಕ ಸತೀಶ್ ಕುಮಾರ್, ಆಂಗ್ಲ ಮಾಧ್ಯಮದ ಶಿಕ್ಷಕಿಯರಾದ ವಿದ್ಯಾಶ್ರೀ, ಸ್ವರ್ಣ, ಮಾನಸ, ವೇದ ಮತ್ತು ಸಹಾಯಕಿ ದೀಪಿಕಾ ಭಾಗವಹಿಸಿದ್ದರು.