ಮಡಿಕೇರಿ, ಜು. ೨೪: ಅಖಿಲ ಭಾರತ ರಾಷ್ಟಿçÃಯ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿರುವ ಎಸ್.ಐ.ಆರ್. ವಾರ್ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಸಮ್ಮುಖದಲ್ಲಿ ಜಿಲ್ಲಾ ವಾರ್ ರೂಂ ಹಾಗೂ ತಾಲೂಕು ವಾರ್ ರೂಂ ತಂಡದ ಸದಸ್ಯರಿಂದ ಎಸ್.ಐ.ಆರ್. ಕಾರ್ಯಕ್ರಮದ ವಿವರಗಳನ್ನು ಪಡೆದು ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮತದಾರರ ಕರಡು ಪ್ರತಿ ಪ್ರಕಟಗೊಂಡ ನಂತರ ಜಾಗೃತರಾಗಿ ಕೆಲಸ ಮಾಡುವಂತೆ ಸಲಹೆ ಸೂಚನೆಗಳನ್ನು ನೀಡಿದರು.