ಮಡಿಕೇರಿ, ಜು. ೨೪: ಬೆಂಗಳೂರಿನ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದಲ್ಲಿ ನಡೆದ ಸಿಬಿಎಸ್‌ಇ ಕ್ಲಸ್ಟರ್ ೮ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಕೊಡಗು ವಿದ್ಯಾಲಯದ ೧೭ ವರ್ಷದೊಳಗಿನ ಬಾಲಕರ ಟೇಬಲ್ ಟೆನ್ನಿಸ್ ತಂಡವು ಕಂಚಿನ ಪದಕ ಗೆದ್ದು ಸಾಧನೆ ಮಾಡಿದೆ.

ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ೨೦೦ ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು, ಕೊಡಗು ವಿದ್ಯಾಲಯದ ಆಟಗಾರರಾದ ಅವನೀಶ್ ಕೃಷ್ಣ, ದೇವಾರ್ಯ, ಫೆಲಿಕ್ಸ್ ರೊನಾಲ್ಡ್ ಮತ್ತು ಅದಿತ್ ಗೌತಮ್ ಅವರನ್ನು ಒಳಗೊಂಡ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ *೩ನೇ ಸ್ಥಾನ* ವನ್ನು ಗಳಿಸಿದೆ. ಈ ತಂಡದ ಆಟಗಾರರನ್ನು ಶುಭಮ್ ಸಾತ್ವಿಕ್ ತರಬೇತಿಗೊಳಿಸಿರುತ್ತಾರೆ ಎಂದು ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಸುಮಿತ್ರಾ ಕೆ.ಎಸ್ ತಿಳಿಸಿದ್ದಾರೆ.