ಮಡಿಕೇರಿ, ಜು. ೨೪: ರಾಜ್ಯದ ವಿವಿಧೆಡೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂಭವಿಸಿರುವ ಹಿನ್ನೆಲೆ ಅಧ್ಯಯನ ನಡೆಸಲು ಪ್ರಮುಖರ ತಂಡವನ್ನು ಕರ್ನಾಟಕ ಭಾರತೀಯ ಜನತಾ ಪಕ್ಷದಿಂದ ರಚಿಸಲಾಗಿದೆ.

ಕೊಡಗು ಸೇರಿದಂತೆ ಮಂಗಳೂರು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಿಗೆ ಸಂಬAಧಿಸಿದAತೆ ಅರಗ ಜ್ಞಾನೇಂದ್ರ, ವಿ. ಸುನಿಲ್ ಕುಮಾರ್, ಗುರುರಾಜ್ ಗಂಟಿಹೊಳೆ, ಕಿರಣ್ ಕಿಮಾರ್ ಕೊಡ್ಗಿ, ಯಶಪಾಲ್ ಸುವರ್ಣ, ಗಿರ್ಮೆ ಸುರೇಶ್ ಶೆಟ್ಟಿ, ಹರೀಶ್ ಪೂಂಜಾ, ಉಮಾನಾಥ್ ಕೋಟ್ಯಾನ್, ಡಾ. ವೈ. ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ರಾಜೇಶ್ ನಾಯ್ಕ್, ಭಾಗೀರಥಿ ಮುರಳ್ಯ, ಸಿಮೆಂಟ್ ಮಂಜುನಾಥ್, ಹೆಚ್.ಕೆ. ಸುರೇಶ್, ಚನ್ನಬಸಪ್ಪ, ಎಂ.ಕೆ. ಪ್ರಾಣೇಶ್, ಸುಜಾ ಕುಶಾಲಪ್ಪ, ಡಾ. ಧನಂಜಯ ಸರ್ಜೆ, ಕಿಶೋರ್ ಕುಮಾರ್ ಪುತ್ತೂರು ಹಾಗೂ ಕಲ್ಮರುಡಪ್ಪ ಅವರುಗಳು ಅಧ್ಯಯನ ತಂಡದಲ್ಲಿ ಇದ್ದಾರೆ. ಸಂಯೋಜಕರಾಗಿ ಡಿ.ಎಸ್. ಅರುಣ್ ಕಾರ್ಯನಿರ್ವಹಿಸಲಿದ್ದಾರೆ.

ಡಾ. ನವೀನ್ ಕುಮಾರ್ ನೇಮಕ

ಚಾಮರಾಜನಗರ, ಮೈಸೂರು, ರಾಮನಗರ, ಮಂಡ್ಯ ವಿಭಾಗದ ತಂಡದಲ್ಲಿ ಮಡಿಕೇರಿಯ ಮಕ್ಕಳ ತಜ್ಞ, ರಾಜ್ಯ ಬಿ.ಜೆ.ಪಿ. ಕೃಷಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಬಿ.ಸಿ. ನವೀನ್ ಕುಮಾರ್ ನೇಮಕಗೊಂಡಿದ್ದಾರೆ.