ವೀರಾಜಪೇಟೆ, ಜು. ೨೭: ವೀರಾಜಪೇಟೆ ಸಮೀಪದ ಗೌರಿಕೆರೆಯಲ್ಲಿ ಅಕ್ರಮ ಕಾಮಗಾರಿಯಿಂದ ತಡೆಗೋಡೆ ಕುಸಿದು ಮನೆಗೆ ಹಾನಿಯಾದ ಪ್ರಕರಣಕ್ಕೆ ಸಂಬAಧಿಸಿ ದಂತೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ನಡೆಸದಂತೆ ಸೂಚಿಸಿ ಕಾಮ ಗಾರಿಯನ್ನು ಸ್ಥಗಿತಗೊಳಿಸ ಲಾಗಿತ್ತು ಎಂದು ವೀರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ ಮಾಹಿತಿ ನೀಡಿದರು.

ತಡೆಗೋಡೆ ಕುಸಿತಗೊಂಡ ಸ್ಥಳಕ್ಕೆ ವೀರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಅವರು, ಅಧಿಕಾರಿಗಳ ತಂಡದೊAದಿಗೆ ಹಾಗೂ ಸ್ಥಳದ ಮಾಲೀಕ ರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಘಟನೆ ನಡೆದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿತ್ತು. ಅಕ್ರಮವಾಗಿ ಕಲ್ಲು ಬಂಡೆಗಳನ್ನು ಒಡೆ ಯುತ್ತಿದ್ದ ಕಾರಣ ಕೂಡಲೇ ಕೆಲಸ ನಿಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಬಳಿಕ ಕೆಲಸವನ್ನು ಸ್ಥಗಿತ ಗೊಳಿಸಲಾಗಿತ್ತು. ಅದರ ನಡುವೆ ಮಳೆ ಯಾದ್ದರಿಂದ ಆ ಜಾಗದಲ್ಲಿ ನೀರು ತುಂಬಿ ಕೊಂಡು ಸ್ಥಳೀಯರಿಗೆ ಆತಂಕ ಉಂಟಾಗಿದ್ದಲ್ಲದೆ ಶಾಲಿನಿ ಎಂಬವರ ಮನೆಯ ತಡೆಗೋಡೆ ಅಲ್ಪ ಪ್ರಮಾಣದಲ್ಲಿ ಕುಸಿತಗೊಂಡು ಅಲ್ಲಿ ಅಪಾಯ ಉಂಟಾಗುವ ಸಂಭವ ಇದ್ದುದರಿಂದ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿದ್ದೇವು. ಆದರೆ ಶಾಲಿನಿ ಅವರ ಮನೆಯ ತಡೆಗೋಡೆಗೆ ಪರಿಹಾರ ಕ್ರಮವನ್ನು ತೆಗೆದ Äಕೊಳ್ಳಲು ಜಾಗದ ಮಾಲೀಕ ರನ್ನು ಪತ್ತೆಹಚ್ಚುವುದು ಸವಾಲು ಆಗಿತ್ತು ಎಂದು ಮುಖ್ಯಾಧಿಕಾರಿ ವಿವರಿಸಿದರು.

ಈ ಹಿಂದೆ ಆ ಜಾಗವನ್ನು ತೆಗೆದುಕೊಂಡಿದ್ದ ಮಾಲೀಕರ ದೂರವಾಣಿಗೆ ಕರೆ ಮಾಡಿ ವಿಚಾರಿಸಿದ ಸಂದರ್ಭ ಅವರು ಅದನ್ನು ಬೇರೆಯವರಿಗೆ ಮಾರಾಟ ಮಾಡಿರು ವುದಾಗಿ ತಿಳಿಸಿದ್ದರಲ್ಲದೆ, ಆ ಜಾಗವನ್ನು ಪಡೆದು ಕೊಂಡವರ ಮಾಹಿತಿ ಯನ್ನು ಅಧಿಕಾರಿಗಳಿಗೆ ನೀಡದೆ ಸತಾಯಿಸಿ ದ್ದರು. ಬಳಿಕ ವೀರಾಜಪೇಟೆ ನಗರ ಪೊಲೀಸ್ ಠಾಣೆಗೆ ದೂರು ನೀಡಿ ಸ್ಥಳದ ಮಾಲೀಕರನ್ನು ಪತ್ತೆಹಚ್ಚಿ ಅವರನ್ನು ಕಾಮಗಾರಿ ನಡೆಸಿದ ಸ್ಥಳಕ್ಕೆ ಕರೆಯಿಸಲಾಯಿತು ಎಂದು ತಿಳಿಸಿದರು. ತಡೆಗೋಡೆ ಕುಸಿತ ಗೊಂಡಿರುವ ವಿಚಾರವನ್ನು ಅವರ ಗಮನಕ್ಕೆ ತಂದ ಬಳಿಕ ಅವರು ತಡೆಗೋಡೆ ಯನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಸರಿಪಡಿಸಿ ಕೊಡುವ ಬಗ್ಗೆ ವೀರಾಜಪೇಟೆ ಠಾಣೆಯಲ್ಲಿ ಬರೆದು ಕೊಟ್ಟಿರುವುದಾಗಿ ತಿಳಿಸಿದರು. ಈ ಅಕ್ರಮ ಕಾಮಗಾರಿಯ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಲಿಖಿತವಾಗಿ ಮಾಹಿತಿ ನೀಡಲಾಗಿದೆ. ಅವರು ಕೂಡ ಪರಿಶೀಲನೆ ನಡೆಸಿದ್ದರು ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದರು.