ಕುಶಾಲನಗರ, ಜು. ೨೭: ಕೂಡಿಗೆ ಆಂಗ್ಲ ಮಾಧ್ಯಮ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಕನ್ನಡ ಭಾಷಣ ಸ್ಪರ್ಧೆಯನ್ನು ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲೆ ಭಾರತಿ ವಹಿಸಿದ್ದರು.
ಈ ಸಂದರ್ಭ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಾಗಿ ‘ಕನ್ನಡಕ್ಕೆ ನಮ್ಮ ಸಂಕಲ್ಪ’ ಎಂಬ ವಿಷಯವಾಗಿ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಭಾಷಣ ಸ್ಪರ್ಧೆಯಲ್ಲಿ ಪ್ರಕೃತಿ ಎಸ್.ಪಿ. ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಸಾನ್ವಿ ಪೂವಮ್ಮ ಹಾಗೂ ಜೀವಿತ ತೃತೀಯ ಸ್ಥಾನ ಪಡೆದು ವಿಜೇತರಾದರು. ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನೆನಪಿನ ಕಾಣಿಕೆ ಹಾಗೂ ಬಹುಮಾನ ವನ್ನು ವಿತರಿಸಲಾಯಿತು.
ಹತ್ತು ವರ್ಷಗಳಿಂದ ನಿರಂತರವಾಗಿ ಶಾಲೆ ಮತ್ತು ಶಾಲಾ ಆವರಣವನ್ನು ಶುಚಿಯಾಗಿರಿಸಿ ಶಾಲಾ ಮಕ್ಕಳ ಆರೋಗ್ಯವನ್ನು ಕಾಪಾಡಿ ಕೊಂಡು ಬಂದ ಅಲ್ಲಿನ ಸ್ವಚ್ಛತಾ ಸಿಬ್ಬಂದಿಗಳಾದ ಸುಧಾ, ರಾಧಾ ಆರ್. ಮತ್ತು ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಕೊಡಗು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಕುದುಪಜೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿವ್ಯ, ಜಿಲ್ಲಾ ಉಪಾಧ್ಯಕ್ಷ ರಾಜೇಶ್, ಜಿಲ್ಲಾ ಸಂಚಾಲಕ ಗೋವಿಂದರಾಜ್ ದಾಸ್, ಟೈಲರ್ಸ್ ಘಟಕದ ಅಧ್ಯಕ್ಷ ಕೃಷ್ಣ, ಪೂರ್ಣಿಮಾ, ತಾಲೂಕು ಅಧ್ಯಕ್ಷ ಅಣ್ಣಯ್ಯ, ರೂಪ ಹಾನಗಲ್, ತಾಲೂಕು ಗೌರವ ಅಧ್ಯಕ್ಷ ಧನರಾಜ್, ಖಜಾಂಚಿ ರೊನಾಲ್ಡ್, ಕಾರ್ಯದರ್ಶಿ ರಾಕೇಶ್, ಹೋಬಳಿ ಅಧ್ಯಕ್ಷೆ ಗೀತಾ ರಾಜೇಶ್, ಪುಷ್ಪ, ಯಶೋಧ ಹಾಜರಿದ್ದರು. ಶಿಕ್ಷಕಿ ಅಮೃತ ಕಾರ್ಯಕ್ರಮ ನಿರೂಪಿಸಿದರು.