ವೀರಾಜಪೇಟೆ, ಜು. ೨೭: ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ ಬೊಳ್ಳುಮಾಡುವಿನಿಂದ ಕಾಕೋಟುಪರಂಬುಗೆ ತೆರಳುವ ರಸ್ತೆಯನ್ನು ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಉದ್ಘಾಟಿಸಿದರು.
ಇದೇ ಸಂದರ್ಭ ಪಾಲಚಂಡ ಐನ್ಮನೆಗೆ ತೆರಳುವ ರಸ್ತೆ ಹಾಗೂ ಮಂಡೆಪAಡ ಐನ್ಮನೆಗೆ ತೆರಳುವ ರಸ್ತೆಯ ಒಟ್ಟು ರೂ. ೨೪ ಲಕ್ಷಗಳ ನೂತನ ಕಾಂಕ್ರೀಟ್ ರಸ್ತೆಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಬಳಿಕ ಮಾತನಾಡಿದ ಶಾಸಕರು, ಸಾರ್ವಜನಿಕರ ಬಹುಕಾಲದ ಬೇಡಿಕೆಯನ್ನು ಮನಗಂಡು ಈ ರಸ್ತೆಯನ್ನು ನಿರ್ಮಿಸಿಕೊಟ್ಟಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವುದರೊಂದಿಗೆ, ಸರಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಬಳಿಕ ಸ್ಥಳೀಯ ಕಾಲೋನಿಗೆ ಭೇಟಿ ನೀಡಿದ ಶಾಸಕರು ಕಾಲೋನಿಯ ಪರಿಸ್ಥಿತಿಯನ್ನು ಅವಲೋಕಿಸಿ ನಿವಾಸಿಗಳೊಂದಿಗೆ ಮಾತನಾಡಿದರು. ಅಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ಶಾಸಕರು, ಸ್ಥಳೀಯ ಗ್ರಾಮಸ್ಥರು ನಿರ್ಮಿಸಿದ ಮಾದೇರಪ್ಪ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಈ ಸಂದರ್ಭ ವಲಯ ಅಧ್ಯಕ್ಷ ಬಟ್ಟಕಾಳಂಡ ರಾಜ ದಿನೇಶ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷÀ ಹನೀಫ್, ತಾಲೂಕು ಘಟಕದ ಅಧ್ಯಕ್ಷ ರಫೀಕ್, ನಾಸಿರ್, ಬೂತ್ ಅಧ್ಯಕ್ಷ ಪಾಲಚಂಡ ಸುರೇಶ್, ಗ್ರಾಮಸ್ಥರಾದ ಮಾದಂಡ ಅರುಣ್, ರನ್ನು, ಮುಂಡAಡ ಅನಿಲ್, ಚೋಟೆರ ರಮೇಶ್, ಸಚಿನ್ ಕುಟ್ಟಪ್ಪ, ದಿನೇಶ್, ಬಂಟರ ಲೀಲಾದಾರ ರೈ, ಚೀಯಂಡಿರ ಲೋಕೇಶ್ ಮಾದಯ್ಯ, ಲವ, ಕೂತಂಡ ಅನಿಲ್ ಪೂವಣ್ಣ, ಮಾತಂಡ ಪ್ರಕಾಶ್, ಚರ್ಮಂಡ ಪೊನ್ನಪ್ಪ, ಕಾಮೇಯಂಡ ಹರೀಶ್, ಕುಂಡಚ್ಚಿರ ಮಂಜು ದೇವಯ್ಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.